ಗಂಗಾವತಿ : ನಿನ್ನೆ ಅನಾರೋಗ್ಯದಿಂದ ನಿಧನರಾದ ಗಂಗಾವತಿ ಬಜಾರ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಹಾಗೂ ಗಂಗಾವತಿ ತಾಲೂಕು ಸಿಐಟಿಯು ಅಧ್ಯಕ್ಷ ನಾಗೇಶ ನಾಯಕ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾಯಿತು.
ಹೊಸಳ್ಳಿ ರಸ್ತೆಯಲ್ಲಿರುವ ಅವರ ಮನೆಯಲ್ಲಿ ಇರಿಸಲಾಗಿದ್ದ ಪಾರ್ಥಿವ ಶರಿರಕ್ಕೆ ವಿವಿಧ ಸಂಘಟನೆಗಳ ಮುಖಂಡರು ಹೂಹಾರ ಹಾಕಿ ಗೌರವ ನಮನ ಸಲ್ಲಿಸಿದರು. ನಂತರ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ ಈ ಭಾಗದ ಭತ್ತದ ನಾಡಿನಲ್ಲಿ ಬಲಿಷ್ಟವಾದ ಹಮಾಲಿ ಚಳುವಳಿ ಬೆಳೆದು ಬಂದಿದೆ ತಮ್ಮ ಹೋರಾಟದ ಅನುಭವದಿಂದಲೇ ಮುಖಂಡರಾಗಿ ಬೆಳೆದು ಕಾರ್ಮಿಕರ ಹಕ್ಕುಗಳಿಗಾಗಿ ಬದ್ದತೆಯಿಂದ ಕೆಲಸ ಮಾಡಿದ ಸಂಗಾತಿ ನಾಗೇಶ ನಾಯಕ ಆಗಿದ್ದರು ಎಂದು ಹೇಳಿ ನುಡಿನಮನ ಸಲ್ಲಿಸಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್. ಬಸವರಾಜ ಮಾತನಾಡಿ ನಾಗೇಶ ನಾಯಕ ಅವರ ನಿಧನದಿಂದ ಕಾರ್ಮಿಕ ಚಳುವಳಿಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬದವರಿಗೆ ದುಖಃಬರಿಸುವ ಶಕ್ತಿ ಬರಲಿ ಎಂದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಬಿಸಿಯೂಟ ನೌಕರರ ಸಂಘದ ರಾಜ್ಯಾಧ್ಯಕ್ಷೆ ಲಕ್ಷ್ಮೀದೇವಮ್ನ ಸೋನಾರ, ಎಸ್.ಎಫ್.ಐ. ರಾಜ್ಯಾಧ್ಯಕ್ಷ ಅಂಬರೀಶ ಕಡಗದ ಮುಖಂಡರಾದ ಟಿ. ನಬೀಸಾಬ, ಕೃಷ್ಣಪ್ಪ ನಾಯಕ, ಮಂಜುನಾಥ ಡಿಗ್ಗಿ, ಜ್ಞಾನೇಶ ಕಡಗದ, ಹನಮಂತಪ್ಪ ಮುಂತಾವರಿದ್ದರು.