ದೇಶದ ಹಲವು ಭಾಗಗಳಲ್ಲಿ ಹವಾಮಾನವು ನಿರಂತರವಾಗಿ ಬದಲಾಗುತ್ತಿದೆ. ಕೆಲವೆಡೆ ವಿಪರೀತ ಬಿಸಿಲಿನ ತಾಪ ಸುಡುತ್ತಿದ್ದರೆ ಕೆಲವೆಡೆ ಮಳೆ ಹಾಗೂ ಆಲಿಕಲ್ಲು ಮಳೆ ಅವಾಂತರ ಸೃಷ್ಟಿಸುತ್ತಿದೆ. ಏಪ್ರಿಲ್ 23 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ವೆಸ್ಟೆರ್ನ್ ಡಿಸ್ಟರ್ಬೆನ್ಸ್ ಉಂಟಾಗಲಿದೆ, ಇದು ಏಪ್ರಿಲ್ 23 ರವರೆಗೆ ಮೇಲಿನ ಪ್ರದೇಶಗಳಲ್ಲಿ ಸಾಧಾರಣ ಮಳೆ ಮತ್ತು ಹಿಮಪಾತ ತರುವ ನಿರೀಕ್ಷೆ ಇದೆ, ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.