ಆಸಿಡ್ ದಾಳಿ ಸಂತ್ರಸ್ತಗೆ ಸ್ಪಂದಿಸಿದ ಸಿಎಂ :ತಕ್ಷಣವೆ ಸಿಎಂ ಸಚಿವಾಲಯದಲ್ಲಿ ಜಾಬ್ ನೀಡುವಂತೆ ಸೂಚನೆ

  • Krishna Shinde
  • 12 Jan 2024 , 6:16 PM
  • Bengaluru
  • 235

ಬೆಂಗಳೂರು : ಕಳೆದ ವರ್ಷ ವಿಕೃತನೊಬ್ಬನಿಂದ ಆಸಿಡ್ ದಾಳಿಗೆ ತುತ್ತಾಗಿ ಬದುಕು ಸಾಗಿಸಲು ಪರಿತಪಿಸುತ್ತಿದ್ದ ಯುವತಿ ಇಂದು ಸಿಎಂ ಸಿದ್ದರಾಮಯ್ಯರವರನ್ನು  ಭೇಟಿಯಾಗಿ ತನ್ನ ನೋವು ತೋಡಿಕೊಂಡಳು.

ಸಂಕಷ್ಟದ ನಡುವೆಯೂ ಆಕೆಯ ಬತ್ತದ ಜೀವನೋತ್ಸಾಹ ಕಂಡು ಚಕಿತನಾದೆ ಎಂದು ಸಿಎಂ ತಿಳಿಸಿದ್ದಾರೆ.

ಆಕೆಗೆ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ನೌಕರಿ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಮತ್ತು ಅಧಿಕಾರ ಎನ್ನುವುದು ಜನರ ಕಷ್ಟಗಳಿಗೆ ಹೆಗಲಾಗಲು ಸಿಗುವ ಅವಕಾಶ ಎಂದು ನಾನು ನಂಬಿದ್ದೇನೆ ಎಂದು ಸಿಎಂ ಹೇಳಿದ್ದಾರೆ.

Read All News