ಸಿಎಂ ಎಲ್ಲರಿಗೂ ಸಮಾನವಾಗಿ ಆಡಳಿತ ನೀಡಬೇಕು : ಅಶ್ವಥ್ ನಾರಾಯಣ್‌

  • shivaraj bandigi
  • 15 Jan 2024 , 12:32 AM
  • Belagavi
  • 525

ಬೆಳಗಾವಿ :

ಸಿಎಂ ಸಿದ್ದರಾಮಯ್ಯ ಅವರು ಒಂದು ಆಡಳಿತ ಕೊಡಬೇಕು. ಅವರು ಎಲ್ಲ ಸಮುದಾಯಕ್ಕೂ ಸಮನಾಗಿ ನೋಡಿಕ್ಕೊಳ್ಳಬೇಕು. ಆದರೆ ರಾಜಕೀಯ ಪ್ರೇರಿತವಾಗಿ ಮುಸ್ಲಿಂ ಸಮುದಾಯಕ್ಕೆ‌ ಪುಷ್ಠಿಕರಣ ಮಾಡುತ್ತಾರೆ. ಕಾಂಗ್ರೆಸ್ ನವರು ಕೋಮುವಾದಿಗಳು ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತ‌ನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲರನ್ನೂ ಸಮಾನವಾಗಿ ನೋಡಿಕ್ಕೊಳ್ಳಬೇಕು. ಕಾಂಗ್ರೆಸ್ ನ ಕೋಮುವಾದಿಗಳಿಂದ ರಾಜ್ಯದಲ್ಲಿ ಸ್ವಾಸ್ತ್ಯ ಇದೆ ಎಂದರು.

ಮುಸ್ಲಿಂ ಸಮುದಾಯಕ್ಕೆ‌ 10 ಸಾವಿರ ಕೋಟಿ ರೂ. ಖರ್ಚು ಮಾಡುವ ಸಾಮಥ್ರ್ಯ ಇದೆ ಎಂಬ ಸಿದ್ದ ಹೇಳಿಕೆಗೆ ಪ್ರತಿಕ್ರಿಯೆ ‌ನೀಡಿದ ಅವರು, ಬರಗಾಲ, ರೈತರ ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಪರಿಹಾರ ಕೊಡಲು ಆಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಎಲ್ಲರಿಗೂ ಕಿವಿಗೆ ಹೂ ಇಡುವ ಕೆಲಸವನ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಿಪಕ್ಷ ನಾಯಕ ಆರ್ ಅಶೋಕ ಕ್ಕಿಂತ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಶಾಸಕರು ಬೆಂಬಲ ಕೊಡುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಶಾಸಕರು ಯತ್ನಾಳ ಅವರ ಬಳಿ ಸಮಸ್ಯೆ ಹೇಳಿಕೊಂಡರೆ ತಪ್ಪೇನು ಎಂದು ಪ್ರಶ್ನಿಸಿ ಅವರು, ಅಶೋಕ ಕ್ಕಿಂತ ಬಸನಗೌಡ ಪಾಟೀಲ ಗೆ ಶಾಸಕರ ಬೆಂಬಲ ಹೆಚ್ಚು. ಯತ್ನಾಳ್ ಯತ್ನಾಳನೆ, ಆದರೆ ಅಶೋಕ ಆರ್. ಆಶೋಕನೆ ಎಂದರು.

Read All News