ಕೊಪ್ಪಳ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ 77ನೇ ಜನ್ಮದಿನ ಇದೇ 12ರಂದು ಆಚರಿಸಲಾಗುತ್ತಿದ್ದು ಅದೇ ದಿನ ಕೋಮುವಾದಿ ಬಿಜೆಪಿ ಮತ್ತು ಭ್ರಷ್ಟ ಜೆಡಿಎಸ್ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಪದಾಧಿಕಾರಿಗಳು ತಿಳಿಸಿದರು.
ಶುಕ್ರವಾರ ಬೆಳಿಗ್ಗೆ ಇಲ್ಲಿನ ಪತ್ರಿಕಾ ಭವನ್ದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮಂಜುಳಾ ಉoಡಿ ವಿವರಿಸಿದ ಅವರು ಒಬ್ಬ ಕುರಿ ಕಾಯುವ ಮಗ 2ನೇ ಬಾರಿ ಮುಖ್ಯಮಂತ್ರಿಯಾಗಿ ಜನಸಾಮಾನ್ಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವುದನ್ನು ನೋಡಿ ಹೊಟ್ಟೆ ಕಿಚ್ಚಿನಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಅವರನ್ನು ಕೆಳಗಿಳಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು ರಾಜ್ಯಪಾಲರು ಕೇಂದ್ರದ ಬಿಜೆಪಿ ಸರ್ಕಾರದ ಕೈ ಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿರುವುದು ಖಂಡನಾರವಾಗಿದೆ ಕೂಡಲೇ ಅವರನ್ನು ರಾಜ್ಯದಿಂದ ವಾಪಸ್ ಕರೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಅವರು ಆಗ್ರಪಡಿಸಿದರು.
ಹನುಮಂತಪ್ಪ ಆಬಿಗೇರಿ ಮಾತನಾಡಿ ಅಗಸ್ಟ್ 12ರಂದು ಬೆಳಿಗ್ಗೆ ನಗರದ ಬನ್ನಿಕಟ್ಟಿ ಹತ್ತಿರ ಇರುವ ಗೌರಿಶಂಕರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 77ನೇ ಜನ್ಮದಿನದ ಪ್ರಯುಕ್ತ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿ ಅಲ್ಲಿಂದ ಅವರ ಅಭಿಮಾನಿ ಬಳಗ ಪ್ರತಿಭಟನೆ ಮೂಲಕ ತಹಸೀಲ್ ಕಚೇರಿಗೆ ತೆರಳಿ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧರಾಷ್ಟ್ರಪತಿಗೆ ಮನವಿ ಪತ್ರ ಅರ್ಪಿಸಲಾಗುವುದು ಎಂದು ವಿವರಿಸಿದರು.
ಗುಡದಪ್ಪ ಬಾನಪ್ಪನವರ ಹಲಗೇರಿ ಮಾತನಾಡಿ ಕೂಡಲೇ ರಾಜ್ಯಪಾಲರನ್ನು ಕೇಂದ್ರ ಸರ್ಕಾರದವರು ವಾಪಸ್ ಕರೆಸಿಕೊಳ್ಳದಿದ್ದರೆ ನಮ್ಮ ಸಂಘದ ವತಿಯಿಂದ ಸುಮಾರು ನೂರಕ್ಕೂ ಅಧಿಕ ಕುರಿಗಳನ್ನು ತೆಗೆದುಕೊಂಡು ರಾಜ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಗುಡದಪ್ಪ ಬಾನಪ್ಪನವರ ಹಲಗೇರಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಕಾರ್ಯಕ್ರಮ ವನ್ನು ನೋಡಿ ಬಿಜೆಪಿ ಮತ್ತು ಜೆಡಿಎಸ್ ಹೊಟ್ಟೆಕಿಚ್ಚಿನಿಂದ ಹೇಗಾದರೂ ಮಾಡಿ ಸಿದ್ದರಾಮಯ್ಯನವರ ಸರ್ಕಾರ ಕೆಡುಬೇಕೆಂದು ಹುನ್ನಾರ ನಡೆಸಿದ್ದಾರೆ ಜೆಡಿಎಸ್ ಪಕ್ಷದ ವರಿಷ್ಠ ಎಚ್ ಡಿ ಕುಮಾರಸ್ವಾಮಿ ಅವರ ಹಗರಣಗಳು ಮುಚ್ಚಿಡಲು ಹೊರಟಿದೆ ಕುತಂತ್ರ ನಡೆಸಿದೆ ಅವರಿಗೆ ಒಂದು ನ್ಯಾಯ ಸಿದ್ದರಾಮಯ್ಯನವರಿಗೆ ಒಂದು ನ್ಯಾಯ ಇದು ಯಾವ ನ್ಯಾಯ ಈ ರೀತಿ ಮಾಡಲು ನಾವು ಬಿಡುವುದಿಲ್ಲ ಎಂದು ಗುಡುದಪ್ಪ ಬಾನಪ್ಪನವರ ಹಲಗೇರಿ ಹೇಳಿ ಕೂಡಲೇ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
ಬಸವರಾಜ್ ಉoಡಿ ಮತ್ತು ಗಂಗಮ್ಮ ಚಿಕನ್ ಕೊಪ್ಪ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿ ಸಿದ್ದರಾಮಯ್ಯನವರ ಜನ್ಮದಿನಾಚರಣೆ ಮತ್ತು ಬಿಜೆಪಿ ಜೆಡಿಎಸ್ ವಿರುದ್ಧದ ಬೃಹತ್ ಪ್ರತಿಭಟನೆ ಕಾರ್ಯಕ್ರಮ ಯಶಸ್ವಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅವರ ಅಭಿಮಾನಿ ಬಳಗ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡರು.
ವರದಿ : ರವಿಚಂದ್ರ ಬಡಗೇರ