ಮಾರುಕಟ್ಟೆಯಲ್ಲಿ ಕಂಗೊಳಿಸುತ್ತಿವೆ ಬಣ್ಣ, ಬಣ್ಣದ ರಾಖಿಗಳು

  • 17 Dec 2023 , 4:30 PM
  • Belagavi
  • 81

ಬೆಳಗಾವಿ :ಅಣ್ಣ- ತಂಗಿಯರ ಸಂಬಂಧ ಗಟ್ಟಿಗೊಳಿಸುವ ರಕ್ಷಾ ಬಂಧನ ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಬಗೆ ಬಗೆಯ ರಾಖಿಗಳು ಕಂಗೊಳಿಸುತ್ತಿವೆ. ಅಣ್ಣ- ತಮ್ಮಂದಿರಿಗಾಗಿ ಸಹೋದರಿಯರು ಖರೀದಿಗೆ ಮುಗಿಬಿದ್ದಿದ್ದಾರೆ.

ಶುಕ್ರವಾರ ರಕ್ಷಾ ಬಂಧನ ನಡೆಯಲಿದೆ. ಹೀಗಾಗಿ ನಗರದ ಗಣಪತಿಗಲ್ಲಿ, ಪಾಂಗುಳಗಲ್ಲಿ, ರವಿವಾರಪೇಟ, ಶನಿವಾರಕೂಡ, ರೈಲ್ವೆ ನಿಲ್ದಾಣ ಕಡೆಗಳಲ್ಲಿ ರಾಖಿ ಮಾರಾಟ ಜೋರಾಗಿ ನಡೆದಿದೆ. ಈ ಬಾರಿ ರಾಖಿ ದರವೂ ದುಬಾರಿಯಾಗಿದೆ. ಆಕರ್ಷಕವಾದ, ಬಣ್ಣ ಬಣ್ಣದ, ಮುತ್ತಿನ, ದಾರದ, ಹತ್ತಿಯ ಹೀಗೆ ವೈವಿಧ್ಯಮಯವಾದ ರಾಖಿಗಳ ಬೆಲೆ ಕೂಡ ವಿಬಿನ್ನವಾಗಿವೆ. ಮಾರುಕಟ್ಟೆಯಲ್ಲಿ ಈ ಬಾರಿ ರಾಖಿಗಳ ದರವು ಹೆಚ್ಚಿದಂತೆ ಕಂಡು ಬರುತ್ತಿದೆ.

ಬಹುತೇಕ ರಾಖಿಗಳು 10 ರೂ. ನಿಂದ ಹಿಡಿದು 500 ರೂ. ವರೆಗೂ ಇವೆ. ಅವರವರಿಗೆ ಖರೀದಿಸುವ ಶಕ್ತಿಗನುಗುಣವಾಗಿ ಜನತೆ ರಾಖಿಗಳನ್ನು ಖರೀದಿಸುತ್ತಿದ್ದಾರೆ. ನಗರದ ಖಡೆಬಜಾರ್, ಗಣಪತಗಲ್ಲಿ, ರೈಲ್ವೆ ನಿಲ್ದಾಣದ ರಸ್ತೆಗಳಲ್ಲಿನ ಬೀದಿ ಬದಿಯ ಅಂಗಡಿಗಳಲ್ಲಿನ ಆಕರ್ಷಕ ರಾಖಿಗಳು ಮಹಿಳೆಯರನ್ನು ಕೈ ಬೀಸಿ ಕರೆಯುತ್ತಿವೆ.

ಮಕ್ಕಳಿಗೆ ಹಾಗೂ ದೊಡ್ಡವರಿಗೆ ಹೀಗೆ ವಿವಿಧ ವಯೋಮಾನದವರಿಗಾಗಿ ಸಣ್ಣ, ದೊಡ್ಡದಾದ ರಾಖಿಗಳು ಮಾರುಕಟ್ಟೆಯಲ್ಲಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಖರೀದಿ ನಡೆಯುತ್ತಿದ್ದು, ಮಂಗಳವಾರವೂ ವ್ಯಾಪಾರ ಜೋರಾಗಿ ನಡೆದಿದೆ.

Read All News