ಬೈಲಹೊಂಗಲ - ಪಟ್ಟಣದ ಕೆಎಲ್ಇ ಪಿಯು ಕಾಲೇಜಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಕಾಮರ್ಸ್ ಫೆಸ್ಟ್ ನೆರವೇರಿತು.
ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ತಟವಾಟಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಈಗಿನಿಂದಲೇ ವ್ಯವಹಾರಿಕ ಜ್ಞಾನ ತಿಳಿದುಕೊಂಡರೆ ಮುಂದೆ ಉಜ್ವಲ ಭವಿಷ್ಯವನ್ನು ಕಾಣುವರು ಎಂದರು.
ಕೆ ಆರ್ ಸಿ ಎಸ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಉಪ ಪ್ರಾಚಾರ್ಯ ಎಮ್. ಎನ್ ಕುಲಕರ್ಣಿ, ಪ್ರೇರಣಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯ ಸುಜಾತ ಹಿರೇಮಠ, ನಿವೃತ್ತ ಪ್ರಧ್ಯಾಪಕರಾದ ಎಸ್ ಎಸ್ ಅಬ್ಬಾಯಿ ವಿದ್ಯಾರ್ಥಿಗಳ ಸಾಧನೆ ಮೆಚ್ಚಿದರು.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವಿವಿಧ ವಿಷಯಗಳ ಮೇಲೆ ವಸ್ತು ಪ್ರದರ್ಶನವನ್ನು ನಡೆಸಿ ವಿವಿಧ ಪ್ರೌಢಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ತಮ್ಮ ವಿಷಯದ ಕುರಿತು ಸಂಪೂರ್ಣವಾದ ಮಾಹಿತಿಯನ್ನು ನೀಡಿ ವಿಜ್ಞಾನ ಪ್ರೀಯರನ್ನಾಗಿ ಮಾಡಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವಿವಿಧ ವ್ಯಾಪಾರ ಸಂಕೀರ್ಣಗಳನ್ನು ತೆರೆದು ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸಿ ವಿವಿಧ ಪ್ರೌಢ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.