ಬೈಲಹೊಂಗಲ : ಪಟ್ಟಣದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ವೇ. ಮೂ.ಡಾ. ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಅವರ ಆಯ್ಕೆ ಈ ಭಾಗದ ಹೆಮ್ಮೆ ಎಂದು ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.
ಅವರು ವಿದ್ಯಾನಗರದ ತಮ್ಮ ಗೃಹ ಕಚೇರಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿಯಾದ ಡಾ. ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಅವರು ರಾಜ್ಯ ಧಾರ್ಮಿಕ ಪರಿಷತ್ತಿನ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡ ಹಿನ್ನಲೆಯಲ್ಲಿ ಅವರನ್ನು ಸತ್ಕರಿಸಿ, ಮಾತನಾಡಿ, ಇದೇ ಮೊದಲಬಾರಿಗೆ ಉತ್ತರ ಕರ್ನಾಟಕ ಭಾಗದವರು ನೇಮಕಗೊಂಡಿರುವದು ಸಂತಸ ತಂದಿದೆ ಎಂದರು. ಸನ್ಮಾನಿಸಲಾಯಿತು.
ಮಹಾಂತೇಶ ಮೂಗಿ, ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ರಾಜು ಕುಡಸೋಮಣ್ಣವರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶ್ರೀಶೈಲ ಯಡಳ್ಳಿ, ವೀರೇಶ ಹೋಳೆಪ್ಪನ್ನವರ, ಕಾಂತಯ್ಯ ಕಾರಿಮನಿ, ವಿಶ್ವನಾಥ ಕರೀಕಟ್ಟಿ, ಗಜಾನನ ರಾನೋಜಿ, ಹಾಗೂ ಇದ್ದರು.