ಬೆಳಗಾವಿ :
ಕಾಂಗ್ರೆಸ್ ಪಕ್ಷದವರು ಗೂಂಡಾ ಸಂಸ್ಕೃತಿ ಇರುವವರು. ಅಧಿಕಾರಕ್ಕೆ ಬಂದೆಗೆಲ್ಲಾ ಹಿಂದು ಕಾರ್ಯಕರ್ತರ ಮೇಲೆ ಈ ರೀತಿ ಹಲ್ಲೆ ಆಗುತ್ತೆ ಎಂದು ವಿಪಕ್ಷ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.ನಾನು ಪೃಥ್ವಿ ಸಿಂಗ್ ಅವರಿಗೆ ಬೇಟಿಯಾಗಿ ಸಾಂತ್ವಾನ್ ಹೇಳಿದ್ದೇನೆ. ಕಳೆದ 2014 ರಿಂದ 2018 ರಲ್ಲಿ 45 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ, ಕಳೆದ 6 ತಿಂಗಳಲ್ಲಿ ಕಲಬುರಗಿ, ಬೆಳಗಾವಿ, ಮಂಗಳೂರು, ಉಡುಪಿಯಲ್ಲಿ ಇಂತಹ ಪ್ರಕರಣ ನಡೆದಿವೆ. ಹಿಂದೂ ಕಾರ್ಯಕರ್ತರ ಮೆಲೆ ಗೂಂಡಾಗಿರಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ನಮ್ಮ ಕಾರ್ಯಕರ್ತರನ್ನ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ, ಹಲ್ಲೆಯಾಗಿರುವುದು ಸಹಿಸಲ್ಲ. ಬಿಜೆಪಿಯವರು ಕಾಂಗ್ರೆಸ್ ಗೂಂಡಾಗಿರಿಗೆ ನಾವು ಬಗ್ಗಲ್ಲ.ಈಗಾಗಲೇ ಎಂಎಲ್ಸಿ ವಿರುದ್ದ ಎಪ್ ಐ ಆರ್ ಆಗಿದೆ. ಮೂರು ಜನರ ಮೆಲೆ ಪ್ರಕರಣ ದಾಖಲಾಗಿದೆ. ನಾವು ಕಾಂಗ್ರೆಸ್ ಗೆ ಬುದ್ದಿ ಕಲಿಸುತ್ತೇವೆ ಎಂದರು.