ಶಿವರಾಜ್ ತಂಗಡಿ ಸತತ ಮೂರನೇ ಗೆಲವು ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

  • Krishna Shinde
  • 15 Jan 2024 , 2:55 AM
  • Koppal
  • 187

 ಗಂಗಾವತಿ:ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಶಿವರಾಜ್ ತಂಗಡಿ ಅವರು  ಮೂರನೇ ಬಾರಿಗೆ ಭಾರಿ ಬಹುಮತ ಅಂತರದಿಂದ  ಗೆಲುವು ಸಾಧಿಸಿದ್ದಾರೆ ಎಂದು ವಿಜಯ ಪತಾಕೆ  ಹಾರಿಸು ಮೂಲಕ ಸಂಭ್ರಮ ಆಚರಣೆ ಮಾಡಿದ ನಂತರ ಜೀ ಶೇಖರ್ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ಉದ್ದೇಶದಿಂದ ಮಾತನಾಡಿ.
 
ಬಡವರ ಬಂಧು ದೀನ ದಲಿತರ ನಾಯಕ ಪ್ರಭುದ್ಧ ರಾಜಕಾರಣಿ ಜನರ ಮನ ಗೆದ್ದ ಧೀಮಂತ ನಾಯಕ ರಾಜಕೀಯದಲ್ಲಿ ಸಹನೆ ಒಳ್ಳೆ ವ್ಯಕ್ತಿ ಯಾವಾಗಲೂ ಜನರ ಕಷ್ಟಗಳಿಗೆ ಸ್ಪಂದಿಸುವಂತಹ ಜನನಾಯಕ ಇಂದು ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಮೂರನೇ ಬಾರಿಗೆ ಆಯ್ಕೆಯಾಗಿರುತ್ತಾರೆ. 

ಆಯ್ಕೆ ಮಾಡಿದ ಎಲ್ಲಾ ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೂ ಮತ್ತು ಪಕ್ಷದ ಮುಖಂಡರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸನ್ಮಾನ್ಯ ಶಿವರಾಜ್ ತಂಗಡಿ ಹಾಲಿ ಶಾಸಕರ ಪರವಾಗಿ ಅಭಿನಂದನೆಗಳು ಸಲ್ಲಿಸುತ್ತಿದ್ದೇನೆ ಎಂದು ಮರಿಸ್ವಾಮಿ ಹೇಳಿದರು ಮತ್ತು ಅದೇ ರೀತಿಯಾಗಿ ಶಾಸಕರಿಗೆ ಸ್ವಾಗತ ಕೋರುತ್ತಾ ಅಭಿನಂದನೆ ಸಲ್ಲಿಸಿದರು ನೂರಾರು ಕಾರ್ಯಕರ್ತರು ಸೇರಿ ಸಂಭ್ರಮಾಚರಣೆ ಮಾಡುವ ಮೂಲಕ ಖುಷಿ ಹಂಚುವುದರ ಮೂಲಕ ಬಹಳ ವಿಜೃಂಭಣೆಯಿಂದ ಸಂಭ್ರಮಾಚರಣೆಯನ್ನು ಆಚರಿಸಿದರು ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಕೆಲಸ ಇದ್ರೂ ಕೂಡ ಒಂದು ವೇಳೆ ನಮ್ಮ ಹಾಲಿ ಶಾಸಕರು ಭೇಟಿಯಾಗದಿದ್ದಲ್ಲಿ ನನ್ನನ್ನು ಸಂಪರ್ಕಿಸಿರೆಂದು ವಿಧಾನಸಭಾ ಕ್ಷೇತ್ರದ ಎಲ್ಲಾ ಜನತೆಗೆ ಅಭಿನಂದನೆಗಳು ಸಲ್ಲಿಸಿ, ನಾನು ಕೂಡ ಅವರಿಗೆ ಚಿರಋಣಿಯಾಗಿದ್ದೇನೆ ಎಂದು ಹೇಳಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಹಾದಿಯಾಗಿದ್ದರು.

Read All News