ಚಿಕ್ಕೋಡಿ : ಲೋಕಸಭೆಗೆ ನಡೆದ ಚುನಾವಣೆಯ ಮತ ಏಣಿಕೆಯು ಇಲ್ಲಿನ ಆರ್.ಡಿ ಕಾಲೇಜಿನಲ್ಲಿ ನಾಳೆ ನಡೆಯಲಿದ್ದು, 16ರಿಂದ 22ರೌಂಡ್ಸ್ ಅಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು,
ಒಂದು ರೂಮ್ ನಲ್ಲಿ 12 ಟೇಬಲ್ ಅಳವಡಿಕೆ ಮಾಡಲಾಗಿದೆ. 865 ಸಿಬ್ಬಂದಿಗಳು ಮತ ಎಣಿಕೆಯಲ್ಲಿ ಇರಲಿದ್ದು,
ಎಸ್‌ಪಿ ನೇತೃತ್ವದಲ್ಲಿ ಮುನ್ನೂರುಕ್ಕೂ ಅಧಿಕ ಸಿಬ್ಬಂದಿ, ಒಂದು ಸಿಆರ್‌ಪಿಎಫ್ ತುಕಡಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,61,694. ಮತದಾರರಿದ್ದು,
13,85,688. ಮತಗಳು ಚಲಾವಣೆಯಾಗಿ ಶೇಕಡಾವಾರು 78.66ರಷ್ಟು ಮತದಾನವಾಗಿತ್ತು
ಬಿಜೆಪಿಯಿಂದ ಅಣ್ಣಾಸಾಹೇಬ್ ಜೊಲ್ಲೆ, ಕಾಂಗ್ರೆಸ್ ನಿಂದ ಪ್ರಿಯಾಂಕಾ ಜಾರಕಿಹೊಳಿ, ಪಕ್ಷೇತರ ಅಭ್ಯರ್ಥಿ ಶಂಭು ಕಲೋಳಕರ್ ಸೇರಿದಂತೆ ಒಟ್ಟು 18 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.