ಸಿಆರಪಿಎಫ ನೇಮಕಾತಿಯಲ್ಲಿನ ಹಿಂದಿ ಹೇರಿಕೆ ವಿರುದ್ಧ ಗುಡುಗಿದ KTR

  • Krishna Shinde
  • 14 Jan 2024 , 10:03 PM
  • Belagavi
  • 205

ಕನ್ನಡ ,ತೆಲುಗು, ತಮಿಳು,ಮಲಯಾಳಂ ಮತ್ತು ಇತರ ಅಧಿಕೃತ ಭಾಷೆಗಳನ್ನು ಸೇರಿಸಲು CRPF ರಾಷ್ಟ್ರೀಯ ನೇಮಕಾತಿ ಅಧಿಸೂಚನೆಯನ್ನು ಪರಿಷ್ಕರಿಸಲು ಅಮಿತ ಷಾರನ್ನು  KTR  ವಿನಂತಿಸಿದ್ದಾರೆ.

ಈ ಸ್ಪರ್ಧಾತ್ಮಕ ಪರೀಕ್ಷೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನಡೆಯುತ್ತಿವೆ, ಇದು ಇಂಗ್ಲಿಷ್ ಮಾಧ್ಯಮದಲ್ಲಿ ಅಧ್ಯಯನ ಮಾಡದ ಅಥವಾ ಹಿಂದಿ ಮಾತನಾಡುವ ರಾಜ್ಯಗಳಲ್ಲದ ವಿದ್ಯಾರ್ಥಿಗಳಿಗೆ ಗಂಭೀರ ಅನಾನುಕೂಲವಾಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ನೇಮಕಾತಿ ಸಂಸ್ಥೆಯು ಬಹು ಪರೀಕ್ಷೆಗಳನ್ನು ಬದಲಿಸಲು ಮತ್ತು 12 ಭಾರತೀಯ ಭಾಷೆಗಳಲ್ಲಿ ನಡೆಸಲು ಸಾಮಾನ್ಯ ಅರ್ಹತಾ ಪರೀಕ್ಷೆ (NRA-CET) ಅನ್ನು ಸುಗಮಗೊಳಿಸಲು ನಿರ್ಧರಿಸಿದೆ.

 ಆದರೆ, ನೋಟಿಫಿಕೇಷನ್ ಸೇರಿದಂತೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಹೇಳಿದ್ದಾರೆ.

Read All News