ಬೈಕ್ ಸವಾರರಿಗೆ ಕ್ಲೋಸರ್ ಡಿಕ್ಕಿ ಸ್ಥಳದಲ್ಲಿ ಒಬ್ಬ ವ್ಯಕ್ತಿಯ ಸಾವು

  • 15 Jan 2024 , 3:30 AM
  • Belagavi
  • 130

ಅಥಣಿ ತಾಲೂಕಿನ ದರೂರ ಗ್ರಾಮದ ಹತ್ತಿರ ಇರುವ ಕೃಷ್ಣ ಶಿಕ್ಷಣ ಸಂಸ್ಥೆಯ ಹತ್ತಿರ ಇರುವ ತಿರುವಿನಲ್ಲಿ ಈ ಘಟನೆ ಸಂಭವಿಸಿದ್ದು ಘಟನೆಯಲ್ಲಿ ಓರ್ವ್ಯಕ್ತಿ ಮೃತಪಟ್ಟಿದ್ದಾನೆ

 ಮೃತ  ವ್ಯಕ್ತಿಯನ್ನು ಅಲಕನೂರು ಗ್ರಾಮದ ಲಕ್ಷ್ಮಣ್(40) ಎಂದು ಗುರುತಿಸಲಾಗಿದ್ದು ಇನ್ನೋರ್ವ ವ್ಯಕ್ತಿಯು ತುಂಬಾ ಗಾಯಗೊಂಡ ಪರಿಣಾಮ ತುರ್ತು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ  ರವಾನಿಸಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಅಥಣಿ ಪೊಲೀಸ್ ಠಾಣಾ ಅಧಿಕಾರಿಗಳು ಅಪಘಾತದ ಕುರಿತು ತನಿಖೆ ಚುರುಕು ಗೊಳಿಸಿದ್ದಾರೆ

ಈ ಘಟನೆ ಕುರಿತು ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ
 

Read All News