ಬೈಲಹೊಂಗಲ : ಇಂದಿನ ಕಾಲದಲ್ಲಿ ಗುರುವಿನ ಪಾದಪೂಜೆಯಂತಹ ಪರಂಪರೆಯನ್ನು ಮುಂದುವರೆಸಿಕೊಂಡು, ಮಕ್ಕಳಲ್ಲಿ ಸಂಸ್ಕಾರದ ಅರಿವನ್ನು ಮೂಡಿಸುತ್ತಿರುವ ಡಾ. ಮಹಾಂತೇಶ ಶಾಸ್ತ್ರಿಗಳವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಚಿತ್ರನಟ ಶಿರಂಜನ ಬೋಳಣ್ಣವರ ಹೇಳಿದರು. ಅವರು ಪಟ್ಟಣದ ಮುರಗೋಡ ರಸ್ತೆಯ ಬಸವನಗರದಲ್ಲಿರುವ ಶ್ರೀ ಮಾತಾ ಗುರುಕುಲ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಗುರುಪೂರ್ಣಮಿಯ ನಿಮಿತ್ಯ ಗದಗಿನ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರ
ಪಾದಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೊಪ್ಪಳ ನಶಾಮುಕ್ತಿ ಕೇಂದ್ರದ ಡಾ. ಸಂತೋಷ ಹಿರೇಮಠ, ದೇಶಿಯ ಸಂಸ್ಕೃತಿಕ ಕೊಡುಗೆ ತೊಡುಗೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ಡೆಂಗ್ಯೂ ಜ್ವರದ ಕುರಿತು ಮಕ್ಕಳಿಗೆ ತಿಳುವಳಿಕೆ ನೀಡಿದರು. ಮುಖ್ಯ ಅತಿಥಿಗಳಾಗಿ ಶಿಕ್ಷಕ ಆರ್.ಏ. ಅರಭಾವಿ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.
ವರದಿ : ರವಿಕಿರಣ್ ಯಾತಗೇರಿ