ಬೆಳಗಾವಿ: ಕನ್ನಡ ಚಲನ ಚಿತ್ರರಂಗದ ಬುದ್ದಿವಂತ ಎಂದು ಹೆಸರಿರುವ ನಟ ನಿರ್ಮಾಪಕ ಉಪೇಂದ್ರ ರವರು ದಿನಾಂಕ 12-08-2023 ರಂದು ತನ್ನದೇ ಆದ Facebook Account live ನಲ್ಲಿ,ತನ್ನದೇ ಆದ ವಿಡಿಯೋದಲ್ಲಿ ಕೆಟ್ಟ ಜನಗಳು ಎಂಬುದಕ್ಕೆ ಉದಾಹರಣೆಗಾಗಿ “ಊರು ಎಂದರೆ ಹೋಲಗೇರಿ ಇರುತ್ತೆ”ಎಂದು ಮಾತನಾಡಿ ಜಾತಿಯನಿಂದನೆ ಮಾಡಿದ ಕಾರಣ ಕರ್ನಾಟಕ ಭೀಮ್ ಸೇನೆ ಬೆಳಗಾವಿ ನಟ ಉಪೇಂದ್ರ ವಿರುದ್ಧ ಕಿಡಿಕಾರಿದ್ದಾರೆ.
ಉಪೇಂದ್ರ ಅಲಿಯಾಸ್ ಉಪ್ಪಿ ಬ್ರಾಹ್ಮಣ ಸಮಾಜಕ್ಕೆ ಸೇರಿದು,ಹೋಲಗೇರಿ ಎಂದು ಕೆಟ್ಟ ಪ್ರದೇಶಗಳು, ಕೆಟ್ಟ ಜನರು ಎಂಬರ್ಥದಲ್ಲಿ ಹೇಳಿದ್ದಾರೆ ಇದರಿಂದ ಎಷ್ಟು ದಲಿತರಿಗೆ ಅವಮಾನ, ನಿಂದಿಸಿದಂತಾಗಿದೆ.
ಹಾಗಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜಾತಿ ನಿಂದನೆ, SC ST Prevention of Atrocities Act 1989ರನ್ವಯ, ಭಾರತ ದಂಡ ಸಂಹಿತೆ ಪ್ರಕಾರ IPC (1)(B(C) ಧರ್ಮ, ಜನಾಂಗ, ಜನ್ಮಸ್ಥಳ ಭಾಷೆ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು, ಸೌಹಾರ್ದತೆ ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು ಅಪರಾಧವಾಗಿದೆ.
ಇಂತಹ ಹೇಳಿಕೆ, ದಲಿತ ಜನರಿಗೆ ಮಾಡಿದ ಅವಮಾನ ಇಂತಹ ಹೇಳಿಕೆ ನೀಡಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು, ನಡೆಯುತ್ತಿದು, ಬೆಳಗಾವಿ ಜಿಲ್ಲೆಯಿಂದ ಉಪೇಂದ್ರ ಹೇಳಿಕೆ ವಿರೋಧಿಸಿ ಕರ್ನಾಟಕ ಭೀಮ್ ಸೇನೆ, ಬೆಳಗಾವಿ ಜಿಲ್ಲಾ ಘಟಕ, ಮತ್ತು ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಯಿಂದ ಪದಾಧಿಕಾರಿಗಳು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ, ಮುಖಾಂತರ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಎರಡು ದಲಿತ ಸಂಘಟನೆಗಳಿಂದ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಭೀಮ್ ಸೇನೆ, ಬೆಳಗಾವಿ ಜಿಲ್ಲಾಧ್ಯಕ್ಷ ಪ್ರವೀಣ ಮಾದರ ಜಿಲ್ಲಾ ಉಪಾಧ್ಯಕ್ಷ ಅಕ್ಷಯ್ ಕೆ ಆರ್ .ಕರ್ನಾಟಕ ಪರಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ರಾಜ್ಯಾಧ್ಯಕ್ಷರು ಮಹೇಶ ಶಿಗೀಹಳ್ಳಿ ಉಪಾಧ್ಯಕ್ಷರು ಶಿವಾ ನಾಯಕ,ಮಾನವ ಬಂದುತ್ವ ವೇದಿಕೆ ಪಧಾದಿಕಾರಿಯಾದ ಆಕಾಶ ಬೇವಿನಕಟ್ಟಿ ಮತ್ತು ಉಪಸ್ಥಿತರಿದ್ದರು.