ಇಂದಿನಿಂದ ದಾನಮ್ಮದೇವಿ ಜಾತ್ರಾ ಮಹೋತ್ಸವ

  • shivaraj bandigi
  • 25 Apr 2024 , 5:13 PM
  • Belagavi
  • 658

ಬೈಲಹೊಂಗಲ- ಪಟ್ಟಣದ ಶ್ರೀ ದಾನಮ್ಮದೇವಿ ದೇವಸ್ಥಾನದ 15 ನೇ ವರ್ಷದ ಜಾತ್ರಾ ಮಹೋತ್ಸವ ಇಂದಿನಿಂದ ಮೇ 5 ರವೆಗೆ ಜರುಗಲಿದೆ. 

ಜಾತ್ರಾ ನಿಮಿತ್ಯ ಪ್ರತಿದಿನ ಸಂಜೆ. 6.30ಕ್ಕೆ ನರಗುಂದದ ತಪೋತಾಣ ಪುಣ್ಯಾರಣ್ಯ ಪತ್ರಿವಮಠದ ಸಿದ್ದವೀರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. ಪ್ರತಿದಿನ‌ಶ್ರೀ ದಾನಮ್ಮದೇವಿಗೆ ಅಭಿಷೇಕ ಜರುಗಲಿದ್ದು, 28 ರಂದು ಸಂತಾನ ರಹಿತ ಮಹಿಳೆಯರಿಂದ ಉಡಿ ತುಂಬಿಸಿಕೊಳ್ಳುವ ಕಾರ್ಯಕ್ರಮ. ಮೇ 2ರಂದು ಜಂಗಮ ದಂಪತಿಗಳ ಪಾದಪೂಜಾ , ಮೇ.3ರಂದು ಕಂಕಣ ಕಟ್ಟಿಸಿಕೊಳ್ಳುವ ಕಾರ್ಯಕ್ರಮ, 5ರಂದು ಪುರಾಣ ಮಹಾಮಂಗಲ ಜರುಗುವದು. 

ಮೇ 6 ರಂದು ತೇರಿನ ಕಳಸದ ಪೂಜೆ, ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ,7 ರಂದು ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, 8 ರಂದು ಜಾನಪದ ಸಂಗೀತ ಕಾರ್ಯಕ್ರಮ ಹಾಗೂ ಮೇ 9 ರಂದು ಬೆಳಿಗ್ಗೆ ದಾನಮ್ಮದೇವಿಗೆ ಮಹಾಪೂಜೆ, ಮಧ್ಯಾಹ್ನ ಮಹಾಪ್ರಸಾದ ಹಾಗೂ ಸಂಜೆ ರಥೋತ್ಸವ ಜರುಗಲಿದೆ ಎಂದು ಶ್ರೀ ದಾನಮ್ಮದೇವಿ ದೇವಸ್ಥಾನ ಟ್ರಸ್ಟ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ತಿಳಿಸಿದರು.

ವರದಿ : ರವಿಕಿರಣ್   ಯಾತಗೇರಿ

Read All News