ದಸರಾ ಹಬ್ಬದ ಪ್ರಯುಕ್ತ ದಾಂಡಿಯಾ ಕಾರ್ಯಕ್ರಮ ವಿಜಯ ಪೂಜಾರ

  • 15 Jan 2024 , 4:59 AM
  • Belagavi
  • 244

ಬೆಳಗಾವಿ : ನಗರದಲ್ಲಿ ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ್ ಸಂಸ್ಥೆಯಿಂದ ನವರಾತ್ರಿ ಹಾಗೂ ದಸರಾ ಹಬ್ಬದ ಪ್ರಯುಕ್ತ ದಾಂಡಿಯಾ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸೆ.26 ರಿಂದ ಅಕ್ಟೋಬರ್ 4 ರವರೆಗೆ ಮರಾಠಾ ಮಂಗಲ ಕಾರ್ಯಲಯದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಚಿಕ್ಕ ಮಕ್ಕಳ ತಜ್ಞ ವಿಜಯ ಪೂಜಾರ ಹೇಳಿದರು. ಶುಕ್ರವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ನವರಾತ್ರಿ ಹಾಗೂ‌ ದಸರಾ ಪ್ರಯುಕ್ತ ದಾಂಡಿಯಾ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲದೆ ಶಿಕ್ಷಣ, ಆರೋಗ್ಯ, ನೈರ್ಮಲ್ಯ ಜಾಗೃತಿ ಅಭಿಯಾನದ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

Read All News