ಬೆಳಗಾವಿ : ಸದ್ಯಕ್ಕೆ ರಾಜ್ಯ ಸರ್ಕಾರದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಖಾಲಿ ಇಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಅವರು ಡಿಸಿಎಂ ಹುದ್ದೆ ಚರ್ಚೆಯ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿ, ಮಾತನಾಡಿ, ನಾನು ಯಾರು ಪರನೂ ಇಲ್ಲಾ, ಯಾರ ವಿರೋಧವೂ ಇಲ್ಲ ಎಂದರು. ನಮ್ಮದು ಜಾತ್ಯಾತೀತ ನಿಲುವು ಇರುವ ಪಕ್ಷ, .ವೈಯಕ್ತಿಕವಾಗಿ ಕೆಲವರು ಡಿಸಿಎಂ ಬಗ್ಗೆ ಮಾತನಾಡಿದ್ದಾರೆ ಪಕ್ಷ ತೀರ್ಮಾಣ ಕೈಗೊಳ್ಳುತ್ತೆ, .ಡಿಸಿಎಂ ವಿಷಯದ ಕುರಿತು ನಾನು ಮಾತನಾಡಲ್ಲ ಎಂದರು.
ಚನ್ನಪಟ್ಟಣಕ್ಕೆ ಯಾವಾಗಾದರೂ ಚುನಾವಣೆ ಘೋಷಣೆ ಆಗಬಹುದು. ಡಿಕೆಶಿ ಅಥವಾ ಡಿಕೆ ಸುರೇಶ್ ಇಬ್ಬರಲ್ಲಿ ಯಾರು ಅಂತಾ ತೀರ್ಮಾನ ಆಗಿಲ್ಲ. ಮಂಡ್ಯದಲ್ಲಿ ನನ್ನ ಸೋಲಿಸಲು ಯತ್ನಿಸಿದರು ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ನಮ್ಮನ್ನ ಸೋಲಿಸಲು ನೋಡಿದ್ರೂ ಆಗ ಜನ ಗೆಲ್ಲಿಸಿದ್ರೂ.ನಾನು ಜೆಡಿಎಸ್ ನಲ್ಲಿ ಇಲ್ಲಾ ನಮ್ಮ ಪಕ್ಷದ ಪರವಾಗಿ ಕೆಲಸ ಮಾಡಬೇಕು. ನಮ್ಮ ಅಭ್ಯರ್ಥಿ ಗೆಲ್ಲಿಸಲು ಕೆಲಸ ಮಾಡಿದ್ದೇನೆ. ಕುಮಾರಸ್ವಾಮಿ ಅವರು ಕೆಲಸ ಮಾಡಲಿ ಒಂದು ವರ್ಷ ಎನೂ ಮಾತಾಡಲ್ಲ.
ಕುಮಾರಸ್ವಾಮಿ ಹೊಸದಾಗಿ ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ತಂದೆ ಮಾಡಲು ಆಗದ್ದನ್ನ ಕೆಲಸ ಮಾಡ್ತೇನಿ ಅಂತಾ ಭರವಸೆ ಕೊಟ್ಟಿದ್ದಾರೆ. ಅವರು ಕೆಲಸ ಮಾಡಿದ್ರೇ ನಾನು ಹೆಚ್ಚು ಖುಷಿಪಡುತ್ತೇನೆ ಎಂದರು.
ಈಗ ಕುಮಾರಸ್ವಾಮಿ ಬಗ್ಗೆ ಟೀಕೆ ಟಿಪ್ಪಣಿ ಮಾಡಲ್ಲ. ದೇವೆಗೌಡರ ಕುಟುಂಬದ ಬಗ್ಗೆ ವೈಯಕ್ತಿಕವಾಗಿ ಮಾತಾಡಿಲ್ಲ. ಕೋರ್ಟ್ ಅದರ ಬಗ್ಗೆ ತೀರ್ಮಾನ ಮಾಡುತ್ತದೆ. ಕುಮಾರಸ್ವಾಮಿ ಅವರು ಡಿವೈಡ್ ಆಗಿದ್ದೇವೆ ಅಂತಾ ಹೇಳ್ತಿದ್ದಾರೆ. ಆದರೆ ಹೀಗಾಗಬಾರದಿತ್ತು ಅದನ್ನ ಕಾನೂನು ನೋಡುತ್ತದೆ ಎಂದರು.