ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 2021ರ ನಂತರ ಇದೇ ಮೊದಲ ಬಾರಿಗೆ ಇಂದು (ಡಿಸೆಂಬರ್ 4) ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಉಕ್ರೇನ್ ಯುದ್ಧ ಮತ್ತು ಪಾಶ್ಚಾತ್ಯ ನಿರ್ಬಂಧಗಳ ಹಿನ್ನೆಲೆಯಲ್ಲಿ ಈ ಭೇಟಿಯು ಜಾಗತಿಕ ರಾಜಕೀಯದ ಕೇಂದ್ರಬಿಂದುವಾಗಿದೆ.
ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪುಟಿನ್ ನಡುವೆ ನಡೆಯಲಿರುವ ಖಾಸಗಿ ಭೋಜನ ಕೂಟದಲ್ಲಿ ರಕ್ಷಣೆ, ಅಣುಶಕ್ತಿ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಮಹತ್ವದ ಒಪ್ಪಂದಗಳಿಗೆ ಸಹಿ ಬೀಳುವ ಸಾಧ್ಯತೆ ಇದೆ. ಪುಟಿನ್ ಭೇಟಿಗೂ ಮುನ್ನ, ರಷ್ಯಾ ಸಂಸತ್ತು ಈಗಾಗಲೇ ಭಾರತದೊಂದಿಗೆ ಪ್ರಮುಖ ರಕ್ಷಣಾ ಒಪ್ಪಂದಕ್ಕೆ ಅನುಮೋದನೆ ನೀಡಿದೆ.
ಅಮೆರಿಕ ಮತ್ತು ಯುರೋಪ್ ಕಳವಳದಿಂದ ಈ ಮಾತುಕತೆಗಳತ್ತ ನೋಡುತ್ತಿವೆ. ಎಲ್ಲಾ ಒತ್ತಡಗಳ ನಡುವೆಯೂ ಭಾರತ ತನ್ನ ಸ್ವತಂತ್ರ ದಾರಿಯನ್ನು ತಾನೇ ನಿರ್ಧರಿಸಲಿದೆ ಎಂಬುದನ್ನು ಈ ಭೇಟಿ ಸ್ಪಷ್ಟಪಡಿಸಿದೆ. ಮೋದಿ-ಪುಟಿನ್ ಮಾತುಕತೆಯ ಸಂದೇಶವು ಮುಂದಿನ ಜಿಯೋ-ಪಾಲಿಟಿಕಲ್ ನಕ್ಷೆಯನ್ನು ಬದಲಿಸಬಹುದು.