ರಾಮ ಮಂದಿರದೊಂದಿಗೆ ವಾಲ್ಮೀಕಿ ಮಂದಿರ ನಿರ್ಮಾಣಕ್ಕೆ ಒತ್ತಾಯ: ಮಹೇಶ ಶಿಗೀಹಳ್ಳಿ

  • krishna shinde
  • 15 Jan 2024 , 10:35 AM
  • Belagavi
  • 985

ಬೆಳಗಾವಿ:  ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ಹೊಸ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಅವರ ಹೆಸರನ್ನು ಇಡಲಾಗಿದೆ. ಶುಕ್ರವಾರ ಈ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.

ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯದ ಕರ್ತೃ. ಈ ಮಹಾಕಾವ್ಯವು ಭಾರತೀಯ ಸಂಸ್ಕೃತಿಯ ಅತ್ಯಂತ ಪ್ರಮುಖ ಕೃತಿಗಳಲ್ಲಿ ಒಂದಾಗಿದೆ,ರಾಮಾಯಣವು ಶ್ರೀರಾಮನ ಜೀವನ ಮತ್ತು ಪಾತ್ರವನ್ನು ವಿವರಿಸುತ್ತದೆ ಎಂದು ಮಹೇಶ ಶಿಗೀಹಳ್ಳಿ ತಿಳಿಸಿದ್ದಾರೆ.

ಅಯೋಧ್ಯೆ ರಾಮಾಯಣದ ಪ್ರಮುಖ ಸ್ಥಳವಾಗಿದೆ. ರಾಮನ ಜನ್ಮಸ್ಥಳ ಮತ್ತು ರಾಮಲಲಾ ಮಂದಿರವು ಇಲ್ಲಿವೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಅವರ ಹೆಸರನ್ನು ಇಡುವುದು ಸೂಕ್ತ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಇದಲ್ಲದೆ, ಅಯೋಧ್ಯೆಯಲ್ಲಿ ರಾಮ ಮಂದಿರದೊಂದಿಗೆ ವಾಲ್ಮೀಕಿ ಮಂದಿರವನ್ನು ನಿರ್ಮಿಸಬೇಕೆಂದು ಒತ್ತಾಯಗಳು ಕೇಳಿಬಂದಿವೆ. ರಾಮನನ್ನು ಪರಿಚಯಿಸಿದ ಶ್ರೀ ವಾಲ್ಮೀಕಿ ಗುರುಗಳಿಗೆ ಗೌರವ ಸಲ್ಲಿಸಬೇಕೆಂದು ಮಹೇಶ ಶಿಗೀಹಳ್ಳಿ ತಿಳಿಸಿದ್ದಾರೆ.

ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ದೀಂದ ಹೋರಾಟ ಮಾಡಿ ಆಗಿನ ಸಚಿವ ಸುರೇಶ್ ಅಂಗಡಿ ರವರ ಮುಖಾಂತರ ಪ್ರಧಾನಿ ಮೋದಿ ರವರಿಗೆ ಮನವಿ ಮಾಡಲಾಗಿತ್ತು. ಅದರಂತೆ ಕೇಂದ್ರ ಸರ್ಕಾರ ಈ ಒತ್ತಾಯವನ್ನು ಗಮನಕ್ಕೆ ತೆಗೆದುಕೊಂಡು ರಾಮ ಮಂದಿರ ಜೊತೆಗೆ ವಾಲ್ಮೀಕಿ ಮಂದಿರವನ್ನು ನಿರ್ಮಿಸಲು ಉದ್ದೇಶಿಸಿದೆ ಎಂದು ಮಹೇಶ ಶಿಗೀಹಳ್ಳಿ ತಿಳಿಸಿದ್ದಾರೆ.

Read All News