ಬೆಳಗಾವಿ :
ಕೃಷ್ಣ ಭಾಗ್ಯ ಜಲನಿಗಮ ನಿಯಮಿತ ಹಾಗೂ ಕರ್ನಾಟಕ ನೀರಾವರಿ ನಿಯಮಿತದ ಕಾಮಗಾರಿ ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿ ಬರುವುದರಿಂದ ಆಡಳಿತಾತ್ಮಕ ಹಿತದೃಷ್ಟಿಯಿಂದ ವ್ಯವಸ್ಥಾಪಕ ಕಚೇರಿಗಳನ್ನು ಆಲಮಟ್ಟಿ ಮತ್ತು ಬೆಳಗಾವಿಗೆ ಸ್ಥಳಾಂತರ ಮಾಡವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲಾ ಗುತ್ತಿಗೆದಾರರ ಸಂಘ ಗುರುವಾರ ಬೆಳಗಾವಿ ಸುವರ್ಣ ಗಾರ್ಡನ್ ಬಳಿ ಪ್ರತಿಭಟನೆ ನಡೆಸಿದರು.
ಟೆಂಡರ್ ಪ್ರಿಮಿಯಂನ್ನು ಶೇ.5ಕ್ಕೆ ಸೀಮಿತಗೊಳಿಸಿದ್ದು, ಗುತ್ತಿಗೆದಾರರು ತಮ್ಮ ದರ ನಿಗದಿಸುವುದನ್ನು ಮೊಕಟುಗೊಳಿಸಿದಂತಾಗಿದೆ. ಅದನ್ನು ಮೊದಲಿನಂತೆ ಶೇ.15ಕ್ಕೆ ಏರಿಸಬೇಕ ಎಂದು ಒತ್ತಾಯಿಸಿದರು.