ಮುಸ್ಲಿಂ‌ ಸಮುದಾಯಕ್ಕೆ ‌ಸ್ಮಶಾನ ಜಾಗೆ ಮಂಜೂರಾತಿಗೆ ಒತ್ತಾಯ

  • 15 Jan 2024 , 12:15 AM
  • Belagavi
  • 223

ಬೆಳಗಾವಿ: ಬೆಳಗಾವಿ ತಾಲೂಕಿನ ಅಲಾರವಾಡ ಗ್ರಾಮದ ಮುಸ್ಲಿಂ ಸಮಾಜಕ್ಕೆ ಸ್ಮಶಾನ ಜಮೀನು ಮಂಜೂರು ಮಾಡುವಂತೆ ಆಗ್ರಹಿಸಿ ಮಂಗಳವಾರ ಹಜರತ್ ಬಿಲಾಲ್ ಮಸೀದ್ ಎಜ್ಯೂಕೇಶನ್ ವೆಲ್ ಫೇರ್ ಸೊಸೈಟಿ, ಜಮಾತ್ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರು, ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಅಲಾರವಾಡ ಗ್ರಾಮದಲ್ಲಿ ‌ಮುಸ್ಲಿಂ ಸಮುದಾಯದ ಸುಮಾರು 120 ಮನೆಗಳಿವೆ. ಇಲ್ಲಿ 300 ವರ್ಷಗಳಿಂದ ರಿ.ಸ.ನಂ.280/1,2 ಮತ್ತು 281ನಲ್ಲಿ ಶವ ಸಂಸ್ಕಾರ ಮಾಡುತ್ತಿದ್ದೇವೆ. ಅಲ್ಲದೆ, ಗ್ರಾಮದ ಪಂಚರೂ‌ ಸಹ ಸ್ಮಶಾನಕ್ಕೆ ಜಮೀನು ಕೊಡಲು ಒಪ್ಪಿರುತ್ತಾರೆ ಎಂದು‌ ಮನವಿಯಲ್ಲಿ ತಿಳಿಸಿದ್ದಾರೆ. ಜಿಲ್ಲಾಡಳಿತಕ್ಕೆ 18 ಗುಂಟೆ ಜಮೀನಿಗೆ ಸರಕಾರದಿಂದ ಪರಿಹಾರ ನೀಡಿ‌ ಮುಸ್ಲಿಂ ಸಮಾಜಕ್ಕೆ ಸ್ಮಶಾನ ಜಮೀನು ಮಂಜೂರು ಮಾಡುವಂತೆ ಮನವಿ ಮಾಡಿದರೂ ಇಲ್ಲಿಯವರಗೆ ಸ್ಮಶಾನ ಜಮೀನು ಮಂಜೂರು ಮಾಡಿಕೊಟ್ಟಿಲ್ಲ. ಈಗಲಾದರೂ ಮುಸ್ಲಿಂ ಸಮಾಜಕ್ಕೆ ಸ್ಮಶಾನ ಮಂಜೂರು ಮಾಡದಿದ್ದರೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೃತಪಟ್ಟ ‌ಶವ ಇಟ್ಟು ಪ್ರತಿಭಟನೆ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಕೆ ‌ನೀಡಿದ್ದಾರೆ.

Read All News