ಕುರುಬ ಸಮಾಜಕ್ಕೆ ‌ಮೀಸಲಾತಿ ನೀಡುವಂತೆ ಆಗ್ರಹ

  • 15 Jan 2024 , 1:05 AM
  • Belagavi
  • 246

ಬೆಳಗಾವಿ :ಹಾಲುಮತದ ಕುರುಬರಿಗೆ ಮೀಸಲಾತಿ ನೀಡಬೇಕೆಂದು ಹಾಲುಮತ ಸಮಾಜದ ಮುಖಂಡ ವಿನಾಯಕ ಕಟ್ಟಿಕಾರ ಒತ್ತಾಯಿಸಿದರು.

ಮಂಗಳವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಅವರು ಇತ್ತೀಚೆಗೆ ಸರ್ವ ಪಕ್ಷಗಳ ಸಮಿತಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಆದರೆ ಕುರುಬ ಸಮಾಜ ಬ್ರಿಟಿಷ್ ರ ಕಾಲದಿಂದಲೂ ಎಸ್ಟಿಯಲ್ಲಿದ್ದೇವೆ. ಆದರೆ ಸರಕಾರ‌ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಕೂಡಲೇ ನಮಗೆ ಎಸ್ಟಿ ಮೀಸಲಾತಿ ‌ಕೊಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು. ಶಂಕರ ಹೆಗಡೆ, ಮಾರುತಿ ಮೋಡಿ, ಮನೋಹರ ಮೀಸಾಳೆ ಕೃಷ್ಣಾ ಕಲಬುರಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read All News