ಬೆಳಗಾವಿ :ನೂತನ ಕೇಂದ್ರ ಬಸ್ ನಿಲ್ದಾಣವನ್ನು ಇದೇ ತಿಂಗಳು ಡಿಸೇಂಬರ್ 27 ರಂದು ಸನ್ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. 2006ರಿಂದ ಕೇಂದ್ರ ಬಸ್‌ನಿಲ್ದಾಣಕ್ಕೆ "ರಾಣಿ ಚನ್ನಮ್ಮ” ನ ಹೆಸರು ಇಡುವ ಕುರಿತು ಹೋರಾಟ ನಡೆಯುತ್ತಿದೆ. ಈಗಾಗಲೇ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯನವರಿಗೆ ಮನವಿ ಅರ್ಪಿಸಿದ್ದಾಗಿ ಕನ್ನಡ ಪರ ಹೋರಾಟಗಾರರು ತಿಳಿಸಿದ್ದಾರೆ.
ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣಕ್ಕೆ ಕೆಂಪೆಗೌಡ ಬಸ್ ನಿಲ್ದಾಣವೆಂದು ನಾಮಕರಣ ಮಾಡಿದ್ದಕ್ಕೆ ಅವರ ಹೆಸರು ಬೆಂಗಳೂರಿನ ಮೂಲೆ ಮೂಲೆಯಲ್ಲಿ ರಾರಾಜಿಸುತ್ತಿದೆ. ಅದೇ ರೀತಿ ಬೆಳಗಾವಿ ಚನ್ನಮ್ಮಳ ಗಂಡು ಮೆಟ್ಟಿದ ನಾಡಿನಲ್ಲಿ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣಕ್ಕೆ "ರಾಣಿಚನ್ನಮ್ಮನ ಹೆಸರು ಇಡುವ ಕುರಿತು ಕಳೆದ 17 ವರ್ಷಗಳಿಂದ ನಿರಂತರ ಮನವಿಗಳನ್ನು ಅರ್ಪಿಸಿ ಧರಣಿ ಸತ್ಯಾಗ್ರಹ, ಉರುಳು ಸೇವೆ ಹಾಗೂ ಹಲವಾರು ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ಏನು ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳಾದ ಬೊಮ್ಮಾಯಿಯವರು ಬೆಳಗಾವಿ ನೂತನ ಬಸ್ ನಿಲ್ದಾಣಕ್ಕೆ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡ ನಾಡಿನ ಹೆಮ್ಮೆಯ ಪುತ್ರಿ "ರಾಣಿ ಚನ್ನಮ್ಮ" ನ ಹೆಸರು ಇಡುವ ಮುಖಾಂತರ ಈ ನಾಡಿನ ಸ್ವಾತಂತ್ರ್ಯದ ಹೋರಾಟದ ನೆಲಕ್ಕೆ ಗೌರವಕೊಡಬೇಕಾಗಿ ವಿನಂತಿಸಿದ್ದಾರೆ.