ಸತೀಶ್ ಜಾರಕಿಹೊಳಿಯವರಿಗೆ ಡಿಸಿಎಂ ಸ್ಥಾನ ನೀಡುವಂತೆ ಬಸನಗೌಡ ಮಾರಲದಿನ್ನಿ ಒತ್ತಾಯ

  • Krishna Shinde
  • 15 Jan 2024 , 12:54 AM
  • Bengaluru
  • 205

ಮಸ್ಕಿ :2023 ರ ಕರ್ನಾಟಕ ವಿಧಾನಸಭಾ ಚುನಾವಣೆ  ಬಹಳ ಮಹತ್ವವನ್ನು ಪಡೆದ ಚುನಾವಣೆ ಯಾಗಿದೆ.ರಾಜ್ಯದಲ್ಲಿ ಅತೀ ಹೆಚ್ಚು ಸ್ಥಾನ ಪಡೆಯುವ ಮೂಲಕ ಜನತೆಯನ್ನು ಹುಬ್ಬೇರುವಂತೆ ಮಾಡಿದೆ.  ನಮ್ಮ ಪರಿಶಿಷ್ಠ ಪಂಗಡ ಸಮುದಾಯದ ಸತೀಶ್ ಜಾರಕಿಹೊಳಿ ರವರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಬಸನಗೌಡ ಮಾರಲದಿನ್ನಿ ಉಪಾಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡ ವಿಭಾಗ ರಾಯಚೂರು ಇವರು ಪತ್ರಿಕೆಯ ಮೂಲಕ ಒತ್ತಾಯ.

ನಾವೆಲ್ಲ ಅಂದುಕೊಂಡಂತೆ 2023 ಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಗ್ಯಾರಂಟಿಯಾಗಿತ್ತು. 200 ಯೂನಿಟ್ ವಿದ್ಯುತ್ ಉಚಿತ, ರೂ.2000ಗಳ ಮನೆಯ ಯಜಮಾನಿಗೆ ನಿಶ್ಚಿತ, ಬಿಪಿಎಲ್ ಕುಟುಂಬಕ್ಕೆ 10 ಕೆಜಿ ಖಚಿತ, ಇದು ಕಾಂಗ್ರೆಸ್ ಪಕ್ಷದ ಶಪಥ ಚುನಾವಣೆಯಲ್ಲಿ ಪ್ರತಿಯೊಬ್ಬರಿಗೆ ಗ್ಯಾರಂಟಿ ಕಾರ್ಡ್ ಮೂಲಕ ಅವರಿಗೆ ತಿಳಿವಳಿಕೆ ಮತದಾರರ ಮನಸ್ಸಿನಲ್ಲಿ ಮೂಡಿಸುವ ಮೂಲಕ ಕರ್ನಾಟಕ ರಾಜ್ಯದಲ್ಲಿ 135 ಸ್ಥಾನ ಕಾಂಗ್ರೆಸ್ ಪಡೆದಿದ್ದು, ವಿಶೇಷವಾಗಿ ರಾಯಚೂರು ಜಿಲ್ಲೆಯಲ್ಲಿ ನಾಲ್ಕು ಸ್ಥಾನ ಪಡೆಯುವ ಮೂಲಕ ಜಿಲ್ಲೆಯಲ್ಲಿ ಸಿಂಹ ಪಾಲು ಪಡೆದಂತಾಗಿದೆ. ಯಶಸ್ವಿಗೆ ಭಾರತ್ ಜೋಡೋ ಕಾರ್ಯಕ್ರಮದ ಪರಿಣಾಮ ಜಿಲ್ಲೆಯ ಜನತೆಗೆ ಬೀರಿದೆ.  ಪಕ್ಷಕ್ಕೆ ಮತ ಹಾಕಿದ ರಾಯಚೂರು ಜನತೆಗೆ ಅಭಿನಂದನೆಗಳು. ಹಾಗೆಯೇ ಹಾಗಾಗಿ ಚುನಾವಣೆಯಲ್ಲಿ ಶ್ರಮಿಸಿದ ನಮ್ಮ ರಾಜ್ಯದ ಶಾಸಕರಲ್ಲಿ ವಿಶೇಷತೆಯನ್ನು ಹೊಂದಿದ ಬೆಳಗಾವಿ ಜಿಲ್ಲೆಯ ಯಮಕನಮರಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಅವರು ರಾಜ್ಯದಲ್ಲಿ ಬಹುತೇಕ ಕೆಲ ಶಾಸಕ ಅಭ್ಯರ್ಥಿಗಳು ಒಳ್ಳೆಯ ಸಮಯ ಕೇಳಿ ನೋಡಿ ನಾಮ ಪತ್ರ ಸಲ್ಲಿಸಿದರೆ ಶಾಸಕ ಸತೀಶ್ ಜಾರಕಿಹೊಳಿ ರಾಹುಕಾಲದಲ್ಲಿ ನಾಮ ಪತ್ರ ಸಲ್ಲಿಸಿ ಚುನಾವಣೆಯ ಅಖಾಡದಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಮುದನಂಭಿಕೆಗೆ ತೆರೆ ಎಳೆದ ನಮ್ಮ ಧೀಮಂತ ನಾಯಕರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಬಸನಗೌಡ ಮಾರಲದಿನ್ನಿ ಉಪಾಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡ ವಿಭಾಗ ರಾಯಚೂರು ಇವರು ಪತ್ರಿಕೆಯ ಮೂಲಕ ಒತ್ತಾಯಿಸಿದ್ದಾರೆ.

Read All News