ಅಥಣಿ : ಇವತ್ತು ಕರ್ನಾಟಕ ಮಹಾರಾಷ್ಟ್ರದ ಜನರಿಗೆ ಭಕ್ತಿಯ ದಿನ ಒಂಭತ್ತು ವರ್ಷದ ಪುಟಾಣಿಗಳಿಂದ ತೊಂಬತ್ತು ವರ್ಷದ ವಯೋವೃದ್ಧರ ವರೆಗೂ ಭಕ್ತಿ ಪೂರ್ವಕವಾಗಿ ಆಚರಣೆ ಮಾಡಲ್ಪಡುವ ಆಷಾಢ ಏಕಾದಶಿಯ ಸಂಭ್ರಮ ಎಲ್ಲೆಡೆ ಕಳೆಗಟ್ಟಿದೆ.
ಭಕ್ತರು ವಾರಕರಿ ಸಂಪ್ರದಾಯದಂತೆ ಉತ್ತರ ಕರ್ನಾಟಕ ಸ್ಟೈಲ್ ನಲ್ಲಿ ಪಂಚೆ ಉಟ್ಟು ನೆಹರು ಶರ್ಟ್ ಹಾಗೂ ತಲೆಯ ಮೇಲೆ ಗಾಂಧಿ ಟೋಪಿ ಹಾಕಿ ಹಣೆಯ ಮೇಲೆ ಪಾಂಡುರಂಗನ ಭಕ್ತಿಯ ಪ್ರತೀಕವಾದ ಗಂಧದ ತಿಲಕವನಿಟ್ಟು ಕೈಯಲ್ಲಿ ವೀಣೆ ಹಾಗೂ ಟಾಳ (ಕೈ ಗಂಟೆ ) ಹಿಡಿದು ಭಾರಿಸುತ್ತ ವಿಠ್ಠಲನ ಧ್ಯಾಹ್ನ ಮಾಡಲಾಗುತ್ತದೆ.
ಇವತ್ತು ಗಡಿಯಲ್ಲಿ ಆಷಾಡ ಏಕಾದಶಿಯ ಸಂಭ್ರಮ ಮಕ್ಕಳ ಮೊಗದಲ್ಲೂ ಮಂದಹಾಸ ಮೂಡಿಸಿದೆ ಸಂಬರಗಿ ಗ್ರಾಮದ ಪುಟಾಣಿಗಳು ಶ್ರಿಹರ್ಷ್ ಉಮೇಶ್ ಕೋಳಿ ಹಾಗೂ ಸುಚಿತ್ ಉಮೇಶ್ ಕೋಳಿ ಇಬ್ಬರು ವಾರಕರಿಯಂತೆ ವೇಷ ತೊಟ್ಟು ವಿಠಲನ ನಾಮಸ್ಮರಣೆ ಮಾಡಿದ್ದೂ ನೋಡುಗರ ಗಮನ ಸೆಳೆದಿದೆ.
ವರದಿ : ರಾಹುಲ್ ಮಾದರ