ಹೊಟೇಲ್, ರಸ್ತೆ ಬದಿಯಲ್ಲಿ ತಿಂಡಿ ತಿಂತಿರಾ ? ಜೋಕೆ

  • shivaraj bandigi
  • 13 Feb 2024 , 11:03 PM
  • Belagavi
  • 1144

ಬೈಲಹೊಂಗಲ :  ಬಾಯಿರುಚಿಗೆ ಜನಾ ಮನೆ ಬಿಟ್ಟು ಹೊರಗಡೆ ಸಿಗುವ ತಿನಿಸುಗಳಿಗೆ ಇಷ್ಟಪಡುತ್ತಾರೆ. ನಾವ ತಿನ್ನೂವ ತಿಂಡಿ ಎಷ್ಟು ಆರೋಗ್ಯಕರವಾಗಿದೆ ಎಂದು ವಿಚಾರಿಸುವ ಗೋಜಿಗೂ ಹೊಗಲ್ಲ. 

ಬೆಳಗೆದ್ದು ವಾಯುವಿಹಾರ ಹಾಗೂ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವಾಗ ಹಸಿವಾದರೆ ಮೊದಲು ನೆನಪಾಗುವದು ಹೊಟೇಲಗಳು.

 ನಾವುಗಳು ತಿನ್ನೂವ ಪದಾರ್ಥಗಳು ಎಷ್ಟರಮಟ್ಟಿಗೆ ಆರೋಗ್ಯಕರವಾಗಿದೆ ಎನ್ನುವದನ್ನು ಪರಿಶೀಲನೆ ಮಾಡದಿರುವ ಹಂತಕ್ಕೆ ತಲುಪಿದ್ದೇವೆ. 

ಕಾರಣ ಇಷ್ಟೇ, ಈಗೀನ ಹೊಟೇಲ, ಬೀದಿಬದಿಯ ತಿಂಡಿ ತಯಾರಿಸುವ ಮಳಿಗೆಗಳು ಟೆಸ್ಟಿಂಗ್ ಪೌಡರ ಬಳಕೆ ಮಾಡಿ ಗ್ರಾಹಕರನ್ನು ತಮ್ಮ ಕಡೆಗೆ ಸೆಳೆಯುತ್ತಿವೆ‌. ಎಲ್ಲ ಮಾದರಿಯ ಹೊಟೇಲಗಳಲ್ಲಿ ಇದನ್ನು ಬಳಸದೆ ಇರಬಹುದು ಆದರೆ ಬಹುತೇಕರು ಇದನ್ನು ಅಸ್ತ್ರವಾಗಿ ಬಳಕೆ ಮಾಡುತ್ತಿರುವದಂತೂ ನಿಜ. 

ಬಾಯಿ ರುಚಿಗಾಗಿ ನಾವು ಇಂತಹ ತಿನಿಸುಗಳನ್ನು ತಿಂದರೆ ನಮ್ಮಷ್ಟಕ್ಕೆ ನಾವೇ ವಿಷ ಸೇವಿಸಿದ ಹಾಗೆ. ಮೊದಲೆಲ್ಲ ಬೆಳಿಗ್ಗೆ ಎದ್ದ ತಕ್ಷಣ ಹೊಟೇಲಗೆ ತೆರಳಿ ತಿಂಡಿ ತಿಂದು ತಮ್ಮ ಕಾರ್ಯ ಚಟುವಟಿಕೆಗಳನ್ನು ಆರಂಭ ಮಾಡುತ್ತಿದ್ದ ಜನ ಈಗ ಟೆಸ್ಟಿಂಗ್ ಪೌಡರ ಎಂಬ ವಿಷ ತಿಂದು ವಿನಾಕಾರಣ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ. 

ಟೆಸ್ಟಿಂಗ್ ಪೌಡರ ಎನ್ನುವದು ಒಂದು ವಿಷ ಪದಾರ್ಥ ಬಾಯಿಗೆ ರುಚಿ ನೀಡಿದರೂ ಸಹ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವದಂತೂ ಮಾತ್ರ ನಿಜ. 

ಮೊದಲೆಲ್ಲ ಎಗ್ರೈಸ ಅಂಗಡಿಗಳು ಇರಲಿಲ್ಲ ಈಗೆಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲದೆ ಇತರರು ಕೂಡಾ ಅದರ ದಾಸರಾಗಿ ಬಿಟ್ಟಿದ್ದಾರೆ. 

ತಿನ್ನುವ ಮೊದಲು ಜಾಗೃತಿ ಇರಲಿ ಎನ್ನುವದು ಮಾತ್ರ ನಮ್ಮ ಕಾಳಜಿ ಮತ್ತು ವಿನಂತಿ. ..

ರಸ್ತೆಯಲ್ಲಿ ಸಿಗುವ ಆಹಾರಗಳ ಕುರಿತು, ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುವದು ಅವಶ್ಯಕತೆ ಇದೆ. 

ರಾಜು ಸೊಗಲ ಅಧ್ಯಕ್ಷ ಸಂಗೊಳ್ಳಿ ರಾಯಣ್ಣ ಸಮಿತಿ ಬೈಲಹೊಂಗಲ

ವರದಿ : ರವಿಕಿರಣ್   ಯಾತಗೇರಿ 

Read All News