ಅಥಣಿ : ತಾಲೂಕಿನ ಹಲ್ಯಾಳ ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಚ ಗ್ರಾಮದ ಪರಿಕಲ್ಪನೆಯಿಂದ ಪ್ರತಿ ಮನೆ ಮನೆಗೆ ಕಸದ ಬಕೆಟ್ ವಿತರಣ ಕಾರ್ಯಕ್ರಮ ಜರುಗಿತು.
ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ನೂತನವಾಗಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಇಂದು ಗ್ರಾಮದ ಪ್ರತಿ ಮನೆಗೂ ಬಕೆಟ್ಗಳನ್ನು ವಿತರಿಸಿ ಉಪಯೋಗಿಸುವ ವಿಧಾನಗಳನ್ನು ತಿಳಿಹೇಳಲಾಯಿತು.
ಈ ವೇಳೆಬಮಾತನಾಡಿದ ಗ್ರಾಮ ಪಂಚಾಯತ ಅಧ್ಯಕ್ಷ ಮುದುಕಣ್ಣ ಶೇಗುಣಸಿ ಅವರು ಗ್ರಾಮದ ಪ್ರತಿಯೊಬ್ಬ ನಾಗರಿಕನು ಸ್ವಚ್ಛತೆಗೆಗಾಗಿ ಹೆಚ್ಚಿನ ಗಮನ ಹರಿಸಬೇಕು, ಇದರಿಂದ ಗ್ರಾಮವು ಸ್ವಚ್ಛವಾಗಿರುವುದಲ್ಲದೇ ಯಾವುದೆ ರೀತಿಯ ರೋಗರುಜಿನಗಳಲ್ಲಿದೆ ಇರಬಹುದು ಎಂದರು.
ಇದೇ ವೇಳೆ ಗ್ರಾ.ಪಂ ಸದಸ್ಯರಾದ ವಿಠ್ಠಲ ಮಲಾಬಾದಿ, ವಿಠ್ಠಲ ಮಂಗಸೂಳಿ, ರಾಜು ಮುಲ್ಲಾ, ಶಶಿಕಾಂತ ದಳವಾಯಿ, ಸಿದ್ದಪ್ಪ ಪಾಟೀಲ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಕರ ಪೋತದಾರ ಸೇರಿದಂತೆ ಹಲ್ಯಾಳ ಗ್ರಾಮಸ್ಥರು ಉಪಸ್ಥಿತರಿದ್ದರು.