ಕಮಲಾತಾಯಿ ಫೌಂಡೇಶನ್ ನಿಂದ ಕೋಕೋ ಟ್ರ್ಯಾಕ್ ಸೂಟ್ ವಿತರಣೆ

  • 17 Dec 2023 , 11:00 PM
  • Belagavi
  • 152

ಬೆಳಗಾವಿ : ಖಾನಾಪುರ ತಾಲ್ಲೂಕಿನ ಹಿಡಕಲ್ ಗ್ರಾಮದ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶುಕ್ರವಾರ ಬೆಳಗಾವಿ ಕಮಲಾತಾಯಿ ಫೌಂಡೇಶನ್ ವತಿಯಿಂದ ಕೋಕೋ ಕ್ರೀಡಾಪಟುಗಳಿಗೆ ಟ್ರ್ಯಾಕ್ ಸೂಟ್ ನೀಡಲಾಯಿತು.

ಸದಾ ಸಮಾಜ ಮುಖಿ ಕೆಲಸ‌‌ ಮಾಡಿಕೊಂಡು ಬರುತ್ತಿರುವ ಕಮಲಾತಾಯಿ ಫೌಂಡೇಶನ್ ಕ್ರೀಡಾ ಪಟುಗಳಿಗೆ ಉತ್ತೇನ ನೀಡುವ ನಿಟ್ಟಿನಲ್ಲಿ ಖಾನಾಪುರ ತಾಲೂಕಿನ ಕೋಕೋ ಪಟುಗಳಿಗೆ ಟ್ರ್ಯಾಕ್ ಸೂಟ್ ನೀಡಿ ಕ್ರೀಡಾಪಟುಗಳು ಹಾಗೂ ಶಾಲೆಯ ಸಿಬ್ಬಂದಿಗಳ ಪ್ರಶಂಸೆಗೆ ಪಾತ್ರವಾಯಿತು.

ಈಸಂದರ್ಭದಲ್ಲಿ ಕಮಲಾತಾಯಿ ಫೌಂಡೇಶನ್ ಅಧ್ಯಕ್ಷ ಸಿದಪ್ಪಾ ಪಾಟೀಲ ಮಾತನಾಡಿ, ಕಮಲಾತಾಯಿ ಫೌಂಡೇಶನ್ ಬಡ ವಿದ್ಯಾರ್ಥಿಗಳನ್ನು ಸಮಾಜದ ಮುಖವಾಣಿಗೆ ತರುವ ಸಣ್ಣ ಪ್ರಯತ್ನ ಮಾಡುತ್ತಿದೆ. ಕೋಕೋ ಕ್ರೀಡಾಪಟುಗಳಿಗೆ ಬೇಕಾದ ಸಾಮಗ್ರಿಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಫೌಂಡೇಶನ್ ಕಾರ್ಯದರ್ಶಿ ಅಶೋಕ ಕಬಾಡಗಿ ಹಾಗೂ ಎಸ್ ಡಿಎಂಸಿ ಅಧ್ಯಕ್ಷ ತಿಪ್ಪಣ್ಣ ಶಾಬಂದ್ರಿ, ಶಿಕ್ಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Read All News