ಜಿಲ್ಲಾ ವಿಭಜನೆ ಸರ್ಕಾರ ನೋಡಿಕೊಳ್ಳುತ್ತದೆ. ಕಾಲ ಕೂಡಿ ಬರಬೇಕು ! ಸಚಿವ ಸತೀಶ ಜಾರಕಿಹೊಳಿ

  • shivaraj B
  • 15 Aug 2024 , 2:58 PM
  • Belagavi
  • 406

ಬೆಳಗಾವಿ :  ಜಿಲ್ಲಾ ವಿಭಜನೆಗೆ ಕಾಲ ಕೂಡಿ ಬರಬೇಕು. ಶೀಘ್ರದಲ್ಲೇ ಸರಕಾರ ಈ ಕುರಿತು ಕ್ರಮ ಕೈಗೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಅವರು ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 14 ತಿಂಗಳಿನಿಂದ ಸರಕಾರ ಜನಪರ ಕೆಲಸ ಮಾಡಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಕೊಡಲಾಗಿದೆ ಜಿಲ್ಲೆಯಲ್ಲಿ ಹೆಚ್ಚು ಶಾಲೆ ನಿರ್ಮಾಣ ಮಾಡಲು ಕ್ರಮ ವಹಿಸಲಾಗಿದೆ ಎಂದರು.

ಮಳೆಗಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಸ್ತೆಗಳು ಹಾಳಾಗಿವೆ ಅವುಗಳ ದುರಸ್ತಿ ಮಾಡಲು ಸರಕಾರ ಕ್ರಮ ಕೈಗೊಳ್ಳಲಾಗುವುದು. ಹೊಸ ರಸ್ತೆ ಮಾಡಲು ಅವಕಾಶ ಇಲ್ಲ. ಕೇಂದ್ರ ಸಚಿವ ಗಡ್ಕರಿ ಅವರು ಸಹ ದುರಸ್ತಿ ಮಾಡಬೇಕಾದ ರಸ್ತೆಗಳ ಮಾಹಿತಿ ಕೇಳಿದ್ದಾರೆ. ರಿಂಗ್ ರಸ್ತೆಗೆ ಅನುಮೋದನೆ ನೀಡಲಾಗಿದೆ. ಜಮೀನು ಭೂ ಸ್ವಾಧೀನ ಪಡೆಸಿಕೊಳ್ಳಬೇಕು ಎಂದರು.

ಜಿಲ್ಲಾ ವಿಭಜನೆ ಮಾಡುವ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆ ವಿಭಜನೆ ಮಾಡುವುದು ಸರಕಾರ ನಿರ್ಧಾರ ಮಾಡುತ್ತದೆ ಜಿಲ್ಲಾ ವಿಭಜನೆಗೆ ಕಾಲ ಬರುತ್ತದೆ. ನೋಡಬೇಕು ಯಾವಾಗ ಬರುತ್ತದೆಯೋ ಎನ್ನುವುದು ಎಂದರು.

ಗ್ಯಾರಂಟಿ ಯೋಜನೆ ನಿರಂತರವಾಗಿ ನಡೆಯುತ್ತದೆ. ಅದನ್ನು ಯಾವುದೇ ಕಾರಣಕ್ಕೂ ಸ್ಥಗಿತ ಮಾಡುವುದಿಲ್ಲ. ಜನರ ಮನಸ್ಸಿನಲ್ಲಿ ಏನಿದೆ ಎನ್ನುವುದು ನೋಡಬೇಕು. ನಾನು ಎಂದಿಗೂ ಗ್ಯಾರಂಟಿ ಯೋಜನೆ ಸ್ಥಗಿತ ಮಾಡಬೇಕು ಎಂದು ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದರು.

Read All News