ಕ್ಷೇತ್ರದ ಮಹತ್ವದ ಯೋಜನೆಗೆ ಡಿಕೆಶಿ ಅಡ್ಡಗಾಲು ! ರಮೇಶ ಜಾರಕಿಹೊಳಿ

  • shivaraj bandigi
  • 20 Jun 2024 , 4:26 PM
  • Gokak
  • 3961

ಗೋಕಾಕ :ಬೆಳಗಾವಿ ಹಾಗೂ ಬಾಗಲಕೋಟೆಗೆ ವರದಾನವಾರಬೇಕಿರುವ ಗಟ್ಟಿ ಬಸವಣ್ಣ ಡ್ಯಾಂ ಮೇಲೆ ಮಹಾನಾಯಕನ ಕಣ್ಣು ಬಿದ್ದಿದೆ ಎಂದು ರಮೇಶ ಜಾರಕಿಹೊಳಿ ಗಂಭೀರ ಆರೋಪ ಮಾಡಿದರು. 

ಅವರು ಬೆಳಗಾವಿ ಲೋಕಸಭಾ ಸಂಸದ ಜಗದೀಶ ಶೆಟ್ಟರ ಅಭಿನಂದನಾ ಸಮಾವೇಶದಲ್ಲಿ ಡಿಕೆಶಿ ವಿರುದ್ಧ ಹರಿಹಾಯ್ದು ಈಗಿನ ನೀರಾವರಿ ಸಚಿವರು ಕಾಮಗಾರಿ ಕ್ಯಾನ್ಸಲ್ ಮಾಡೋಕೆ ಪ್ರಯತ್ನ ಮಾಡುತಿದ್ದರು, ಆದರೆ ಈವರೆಗೂ ಯೋಜನೆ ಕ್ಯಾನ್ಸಲ್ ಮಾಡಿಲ್ಲ ಅಕಸ್ಮಾತ್ ಮಾಡಿದ್ದರೆ ಹೋರಾಟ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆ ಎಂದರು. 

ಈ ಕುರಿತು ಜಗದೀಶ ಶೆಟ್ಟರ್ ಮತ್ತು ನಾನು ದೆಹಲಿಗೆ ಹೋಗಿ ಕೇಂದ್ರ ಅರಣ್ಯ ಸಚಿವರಿಗೆ ಭೇಟಿ ಮಾಡಿ, ಮಾತನಾಡಿ ಪರವಾನಗಿ ಪಡೆದುಕೊಂಡು ಬರ್ತಿವಿ ಎಂದರು.

ಸತೀಶ ಜಾರಕಿಹೊಳಿ ಅವರ ಹೆಗಲ ಮೇಲೆ ಬಂದುಕು ಇಡುವ ಹುಣ್ಣಾರ ಡಿಕೆಶಿ ಮಾಡಿ, ಸತೀಶ ಕ್ಯಾನ್ಸಲ್ ಮಾಡಿದ್ದಾರೆ ಅಂತ ಬಿಂಬಿಸಲು ತಯಾರಾಗಿದ್ದ, 

ನಾನು ಸತೀಶಗೆ ಕೇಳಿದಾಗ ನಾನು ಏನು‌ ಹೇಳಿಲ್ಲ ಎಂದರು. 

ಈ ಯೋಜನೆ ಕಾಮಗಾರಿ ಮುಗಿದರೆ ಎಲ್ಲರಿಗೂ ಒಳ್ಳೇದಾಗಲಿದೆ ಎಂದು ರಮೇಶ ಜಾರಕಿಹೊಳಿ ಹೇಳಿದರು. 

ಸರ್ಕಾರ ಬೀಳುವ ಮುನ್ಸೂಚನೆ ನೀಡಿದ ರಮೇಶ ಜಾರಕಿಹೊಳಿ

ಮತ್ತೇನೋ ದೇವರ ಪುಣ್ಯದಿಂದ ಆಗೋದಿದೆ. ಸಿದ್ದರಾಮಯ್ಯ ‌ಇದಾರೆ ಅಂತ ನಾವು ಸುಮ್ಮನಾಗಿದ್ದೇವೆ. ಸಿದ್ದರಾಮಯ್ಯ ಇರಲಿಲ್ಲವಾದರೆ ಮೊದಲ ದಿನದಿಂದಲೇ ಪ್ರಾರಂಭ ಆಗತಿತ್ತು, 

ಸಿದ್ದರಾಮಯ್ಯಗೂ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದರು.

Read All News