ಚಿಕ್ಕೋಡಿ : ಸದ್ಯಕ್ಕೆ ಬೆಳಗಾವಿಯಲ್ಲಿ ಯಾವುದೆ ಪ್ರವಾಹದ ಪರಿಸ್ಥಿತಿ ಇಲ್ಲಾ,ಮಹಾರಾಷ್ಟ್ರ ಹಾಗೂ ರಾಜ್ಯದ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆಗೆ ಮಾತುಕತೆ ಮಾಡಿದ್ದೇವೆ ಎಂದು ಡಿಸಿ ಮೊಹಮ್ಮದ ರೋಷನ್ಹೇಳಿದರು.
ಅವರು ಇಂದು ಗಡಿಭಾಗದ ಗ್ರಾಮಗಳಿಗೆ ತೆರಳಿ ನದಿ ವೀಕ್ಷಣೆ ಮಾಡಿ, ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದ ಜಲಾಶಯ ಹಾಗೂ ಮಹಾರಾಷ್ಟ್ರದ ಜಲಾಶಯಗಳು ಅರ್ಧದಷ್ಟು ಮಾತ್ರ ತುಂಬಿವೆ ಹಾಗಾಗಿ ಸದ್ಯಕ್ಕೆ ಯಾವುದೆ ಆತಂಕ ಪಡುವದು ಬೇಡ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ದ ಎಂದು ಮಾಹಿತಿ ನೀಡಿದರು.