ಕರ್ಪೂರವನ್ನು ದೇವರ ಪೂಜೆಯಲ್ಲಿ ಆರತಿಯನ್ನು ಬೆಳಗಲು ಉಪಯೋಗಿಸುತ್ತೇವೆ . ಇದನ್ನು ಪೂಜೆ ಮಾಡುವಾಗ ನೋಡಿದರೆ ಮನಸ್ಸಿಗೆ ಅದೆಷ್ಟೋ ತೃಪ್ತಿ ಸಿಗುತ್ತದೆ. ಕರ್ಪೂರದಲ್ಲಿ ಪ್ರಮುಖವಾದುದು ಆರತಿ ಕರ್ಪೂರ ಮತ್ತು ಪಚ್ಚೆ ಕರ್ಪೂರ. ಇದನ್ನು ಮಂಗಳಾರತಿ ಮಾಡಲು ಉಪಯೋಗಿಸುತ್ತಾರೆ.
ಇದು ಒಳ್ಳೆಯ ಸುಗಂಧ ದ್ರವ್ಯವು ಕೂಡ ಹೌದು. ಅಲ್ಲದೇ ಕರ್ಪೂರದಿಂದ ನಾನಾ ಔಷಧಿಗಳನ್ನು ಸಹ ತಯಾರಿಸುತ್ತಾರೆ.
ಮನೆಯಲ್ಲಿ ಪ್ರತಿ ದಿನವೂ ಕರ್ಪೂರದಿಂದ ದೇವರಿಗೆ ಮಂಗಳಾರತಿಯನ್ನು ಮಾಡಿದರೆ ಆ ಹೊಗೆಯು ಗಾಳಿಯಲ್ಲಿ ಬೆರೆತು ವಾತಾವರಣವನ್ನು ಶುಚಿಗೊಳಿಸಿ ಪವಿತ್ರತೆಯನ್ನು ತಂದುಕೊಡುತ್ತದೆ.
ಇನ್ನು ಇದರ ಉಪಯೋಗಗಳು ಇಲ್ಲಿವೆ ನೋಡಿ.
ಚಿಟಿಕೆಯಷ್ಟು ಪಚ್ಚೆ ಕರ್ಪೂರವನ್ನು ಪ್ರತಿ ದಿನವೂ ತೆಗೆದುಕೊಂಡರೆ ಇದು ರಕ್ತದೊತ್ತಡವನ್ನು ಕಡಿಮೆ ಮಾಡುವುದಲ್ಲದೇ ಸೋಂಕನ್ನು ಕೂಡ ಕಡಿಮೆ ಮಾಡುತ್ತದೆ.
ಸ್ವಲ್ಪ ಪಚ್ಚೆ ಕರ್ಪೂರವನ್ನು ಗಂಧದ ಜೊತೆ ಸೇರಿಸಿ ಸೇವಿಸಿದರೆ ಮೂತ್ರಕ್ಕೆ ಸಂಬಂಧ ಪಟ್ಟ ರೋಗಗಳನ್ನು ನಿವಾರಿಸಬಹುದು.
ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಕರ್ಪೂರವನ್ನು ಹಾಕಿ ಸ್ನಾನ ಮಾಡಿದರೆ ಚರ್ಮದ ಮೇಲಿರುವ ಎಷ್ಟೋ ಸೂಕ್ಷ್ಮಾಣು ಜೀವಿಗಳು ನಾಶವಾಗುವುದಕ್ಕೆ ಸಹಾಯ ಮಾಡುತ್ತದೆ.
ಮಲಗುವ ಸಮಯದಲ್ಲಿ ಸ್ವಲ್ಪ ಕರ್ಪೂರದ ಬಿಲ್ಲೆಗಳನ್ನು ಒಂದು ಬಟ್ಟೆಯಲ್ಲಿ ಗಂಟು ಕಟ್ಟಿ ಹತ್ತಿರವಿಟ್ಟುಕೊಂಡು ಮಲಗಿದರೆ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ.
ಹಾಗೆಯೇ ಜೀವಕ್ರಿಯೆಗೂ ಸಹ ಸಹಾಯ ಮಾಡುತ್ತದೆ.
ಸ್ವಲ್ಪ ಪಚ್ಚೆ ಕರ್ಪೂರವನ್ನು ಅಡುಗೆ ಮಾಡುವ ಆಹಾರದಲ್ಲಿ ಬೆರೆಸಿದರೆ ಅಹಾರದ ರುಚಿಯನ್ನು ಹೆಚ್ಚಿಸಿ , ಸುವಾಸನೆಯನ್ನು ನೀಡಿ , ಪವಿತ್ರತೆಗೆ ಸಂಕೇತವಾಗುತ್ತದೆ ಎಂದು ಆಗಿನ ಕಾಲದಿಂದಲೂ ಹಿರಿಯರು ಬಳಸುತ್ತಾ ಬಂದಿದ್ದಾರೆ.
ನಿಮ್ಮ ಮನೆಯಲ್ಲಿ ಹೆಚ್ಚು ಸೊಳ್ಳೆಗಳಿದ್ದರೆ ಒಂದು ಲೋಟದ ನೀರಿನಲ್ಲಿ ಕರ್ಪೂರವನ್ನು ಹಾಕಿ ಮಂಚದ ಕೆಳಗೆ ಇಟ್ಟರೆ ಸೊಳ್ಳೆಗಳ ಕಾಟದಿಂದಲೂ ಸಹ ಮುಕ್ತಿ ಹೊಂದಬಹುದು.
ಪ್ರತಿ ನಿತ್ಯವೂ ಸ್ವಲ್ಪ ಪಚ್ಚೆ ಕರ್ಪೂರವನ್ನು ಹಲ್ಲು ಉಜ್ಜುವುದಕ್ಕೆ ಬಳಸಿದರೆ ಕ್ರಿಮಿಗಳು ನಾಶವಾಗಿ , ದಂತ ಸಮಸ್ಯೆಗಳನ್ನು ದೂರ ಮಾಡಿ , ಬಾಯಿಯ ದುರ್ವಾಸನೆಯನ್ನು ಸಹ ದೂರ ಮಾಡುತ್ತದೆ.
ಪಚ್ಚೆ ಕರ್ಪೂರ ಹಾಗೂ ಬೆಲ್ಲವನ್ನು ಸ್ವಲ್ಪ ಮಿಶ್ರಣ ಮಾಡಿ ತೆಗೆದುಕೊಂಡರೆ ಅಸ್ತಮಾದಿಂದ ಪರಿಹಾರ ಕಾಣಬಹುದು.
ಬಿಸಿ ನೀರಿನಲ್ಲಿ ಒಂದಷ್ಟು ಬೇವಿನ ಎಲೆಗಳು ಹಾಗೂ ಕರ್ಪೂರವನ್ನು ಹಾಕಿ ನಿಮ್ಮ ಮನೆಯಲ್ಲಿ ಸಿಂಪಡಿಸಿದರೆ ನೊಣಗಳು, ಕ್ರಿಮಿ ಕೀಟಗಳು ಹಾಗೂ ಸೊಳ್ಳೆಗಳಿಂದ ಮುಕ್ತಿ ಹೊಂದಬಹುದು. ಹಾಗೆಯೇ ನಿಮ್ಮ ಮನೆಯು ಸುಗಂಧ ಭರಿತವಾಗಿ ಕೂಡಿರುತ್ತದೆ.
ಸ್ವಲ್ಪ ಕರ್ಪೂರವನ್ನು ಕೊಬ್ಬರಿ ಎಣ್ಣೆಯ ಜೊತೆ ಮಿಶ್ರಣ ಮಾಡಿ ತಲೆಗೆ ಹಚ್ವಿಕೊಂಡರೆ ತಲೆಯ ಹೊಟ್ಟು ಕಡಿಮೆಯಾಗುತ್ತದೆ.
ಬಿಸಿ ಮಾಡಿದ ಕೊಬ್ಬರಿ ಎಣ್ಣೆಯ ಜೊತೆ ಕರ್ಪೂರವನ್ನು ಹಾಕಿ ಅದು ಕರಗುವವರೆಗೂ ಮಿಶ್ರಣ ಮಾಡಿ ನಿಮ್ಮ ಚರ್ಮದ ಮೇಲೆ ಆಗಿರುವ ಅಲರ್ಜಿ, ತುರಿಕೆಗಳ ಮೇಲೆ ಇಡೀ ರಾತ್ರಿ ಹಚ್ಚಿಕಂಡು ಬೆಳಿಗ್ಗೆ ಎದ್ದ ನಂತರ ತೊಳೆದುಕೊಂಡರೆ ಇವುಗಳಿಂದ ಮುಕ್ತಿ ಹೊಂದಬಹುದು.
ಉಗುರು ಬೆಚ್ಚಗಿರುವ ನೀರಿನಲ್ಲಿ ಸ್ವಲ್ಪ ಕರ್ಪೂರವನ್ನು ಹಾಕಿ ನಿಮ್ಮ ಪಾದಗಳನ್ನು ಅರ್ಧ ಗಂಟೆ ನೆನೆಸಿದರೆ ನಿಮ್ಮ ಹಿಮ್ಮಡಿಗಳನ್ನು ಒಡೆಯದಂತೆ ನೋಡಿಕೊಳ್ಳತ್ತದೆ.