ಅಥಣಿ :
ಸ್ಕೂಟಿ ಕೀ ವಿಚಾರಕ್ಕೆ ಸಂಬಂಧಿಸಿದಂತೆ ಕಬ್ಬಿಣದ ಸಲಾಕೆಯಿಂದ ಹೊಡೆದು ದೊಡ್ಡಮ್ಮಳನ್ನು ಸ್ವಂತ ಸಂಬಂಧಿಕನಿಂದಲೆ ಕೊಲೆಯಾದ ಘಟನೆ ನಡೆದಿದೆ.
ಸ್ಕೂಟಿ (ಮೋಟಾರ್ ಸೈಕಲ್) ಕೀ ಕೂಡಲಿಲ್ಲ ಅಂತಾ ಸ್ವಂತ್ ದೊಡ್ಡಮ್ಮಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಪಾಪಿ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಸೋಮವಾರ ತಡ ರಾತ್ರಿ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮ ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು ಗಂಭೀರ ಗಾಯವಾಗಿತ್ತು. ಗಾಯಗೊಳಗಾದ ಮಂಗಲ ಚಿಕಿಸ್ಥೆ ಲಭಿಸದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.
ಸಂಬರಗಿ ಗ್ರಾಮದ ಮಂಗಲ ತುಕಾರಾಮ ಸಾವಡಕರ (55) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಸಂಜಯ ರಾಜಾರಾಮ ಸಾವಡಕರ (25)ಕೊಲೆ ಮಾಡಿದ ಆರೋಪಿ.ತನ್ನ ಸಂಬಂದಿ ದೊಡ್ಡಮ್ಮಳನ್ನೇ ಕೊಲೆ ಮಾಡಿದ ಆರೋಪಿ ಸಂಜಯ. ಆರೋಪಿ ಸಂಜಯ ತಾಯಿ ಮರಣ ಹೊಂದಿದ ನಂತರ ಈತನಿಗೆ ದಿನಾಲೂ ಕೈತುತ್ತು ನೀಡುತ್ತಿದ್ದ ದೊಡ್ಡಮ್ಮಳ ಕೊಲೆ ಮಾಡಿದ್ದಾನೆ.
ಸೋಮುವಾರ ರಾತ್ರಿ ಮೃತ ಮಹಿಳೆ ಬಯಲು ಶೌಚಕ್ಕೆ ಹೋಗುವ ಮಾರ್ಗಮದ್ಯದಲ್ಲಿ ಹಲ್ಲೆ ಮಾಡಿರುವ ಆರೋಪಿ ಸಂಜಯ ಈತನು ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ್ದ. ನಂತರ ಮೃತ ಮಗಳ ಕಿರಿಚಾಟ ಕೇಳಿ ಕುಂಟುಂಬಸ್ಥರು ಹೋಗಿ ನೋಡಲಾಗಿ ಆರೋಪಿ ಸಂಜಯ ಅಲ್ಲಿಂದ ಪರಾರಿ ಆಗಿದ್ದ ಅಂತಾ ಪ್ರತಕ್ಷದರ್ಶಿ ಮೃತ ಮಹಿಳೆ ಮಂಗಲ್ ಸೊಸೆ ಮಾಹಿತಿ ನೀಡಿದ್ದಾರೆ.
ನಂತರ ಹಲ್ಲೆಗೆ ಒಳಗಾಗ ಮಂಗಲ್ ಇವರನ್ನು ಪಕ್ಕದ ಮಹಾರಾಷ್ಟ್ರ ರಾಜ್ಯದ ಮಿರಜ ಖಾಸಗೀ ಆಸ್ಪತ್ರೆಗೆ ಧಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡ ಮೃತ ಮಂಗಲ್ ಚಿಕಿಸ್ಥೆ ಲಭಿಸದೆ ಮೃತಪಟ್ಟಿದ್ದಾರೆ
ಸ್ವಂತ ದೊಡ್ಡಮ್ಮಳನ್ನೇ ಕೊಲೆ ಮಾಡಿದ ಆರೋಪಿಗೆ ತಕ್ಕ ಶಿಕ್ಷೆ ವಿಧಿಸುವಂತೆ ಸಬಂದಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ನೀರವ ಮೌನ ಆವರಿದೆ.ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತಲೆ ಮರೆಸಿಕೊಂಡಿದ್ದ ಆರೋಪಿ ಸಂಜಯ ಈತನನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣ ಸಂಬಂಧಪಟ್ಟಂತೆ ಪ್ರಕರಣ ಧಾಖಲುಸಿಕೊಂಡ ಅಥಣಿ ಪೊಲೀಸ್ ತನಿಖೆ ನಡೆಸಿದ್ದಾರೆಸದ್ದೇ ಪೊಲೀಸ್ ತನಿಖೆಯಿಂದ ಅಷ್ಟೇ ಕೊಲೆಗೆ ನಿಖರ ಕಾರಣ ಗೊತ್ತಾಗಲಿದೆ.
ವರದಿ : ರಾಹುಲ್