ಬೆಳಗಾವಿ :
ತೆಲಂಗಾಣದಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದಾರೆ. ಹತ್ತು ವರ್ಷ ಚಂದ್ರಶೇಖರ್ ರಾವ್ ರಾಜ್ಯ ನಡೆಸಿದರೂ. ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಮತ ಹಾಕಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.
ಗುರುವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ತೆಲಂಗಾಣದಲ್ಲಿ ಇಂದು ಸರಕಾರ ರಚನೆ ಆಗಿದೆ ಎಲ್ಲರೂ ವಿಷ್ ಮಾಡಿ ಬಂದಿದ್ದೇವೆ.45 ಶಾಸಕರು ಹೋಗಿ ಮೂರು ತಿಂಗಳು ಅಲ್ಲಿಯೇ ಇದ್ದರು. ಅಲ್ಲಿ ಶಾಸಕರು ಬಂದು ನಮ್ಮಲ್ಲಿ ಕೆಲಸ ಮಾಡಿದ್ದರು. ಹದಿನೈದು ಜನರನ್ನ ನಾವು ಅಲ್ಲಿಗೆ ಕಳುಹಿಸಿದ್ದೇವು.ರಾಜಕೀಯದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕಾಗುತ್ತದೆ ಎಂದರು.
ಬಿಜೆಪಿಯವರು ಬರಗಾಲ ಬಂದಿದೆ, ವಿಪಕ್ಷ ನಾಯಕರು ಎಲ್ಲ ಕಡೆ ಓಡಾಡಿದ್ದಾರೆ. ಕೇಂದ್ರ ಸರ್ಕಾರದಿಂದ ದುಡ್ಡು ಕೊಡಿಸಲಿ ಅವರು. ಕಾನೂನು ಪ್ರಕಾರ ನರೇಗಾ 150ದಿನ ಕೂಲಿ ಕೊಡಬೇಕು ಯಾಕೆ ಅನೌನ್ಸ್ ಮಾಡಿಸುತ್ತಿಲ್ಲ. ಈಗ ಅವರು ತಿರುಗಿದ ವರದಿ ಇಟ್ಟುಕೊಂಡು ದೆಹಲಿಗೆ ಹೋಗಿ ಕೊಡಲಿ. ಬರಗಾಲ ಬಂದಿದೆ ನಾವೆಲ್ಲಾ ಅಧ್ಯಾಯ ಮಾಡಿ ವರದಿ ಕೊಟ್ಟಿದ್ದಾರೆ. ಇಷ್ಟು ಹಣ ಬೇಕು ಅಂತಾ ಕೇಳಿದ್ದೇವೆ ಒಂದು ಬಿಡಿಗಾಸು ಕೊಟ್ಟಿಲ್ಲ. ಈಗಾಗಲೇ ಮುಖ್ಯಮಂತ್ರಿ ಹೇಳಿದ್ದಾರೆ ನಾವು ಪರಿಹಾರ ಕೊಡುತ್ತೇವೆ ಎಂದರು.
ಮತ್ತೊಮ್ಮೆ ನಾರಾಯಣ ಹೃದಯಾಲಯ ಬುಕ್ ಮಾಡಿ ಅಂತಾ ಯತ್ನಾಳ ಟ್ವಿಟ್ ವಿಚಾರ ಅದನ್ನೇ ಬುಕ್ ಮಾಡೋಣ ಬಿಡಿ ಎಂದ ಡಿಕೆಶಿವಕುಮಾರ.ಸಿಎಂ ಅವರಿಂದ ಮುಸ್ಲಿಂ ತುಷ್ಟಿಕರಣ ಮಾಡ್ತಿದ್ದಾರೆ ಎಂಬ ಬಿಜೆಪಿ ಆರೋಪ ವಿಚಾರ. ಈ ದೇಶದ ಸಂವಿಧಾನ ಎಲ್ಲರಿಗೂ ಸಹಾಯ ಮಾಡುವಂತೆ ಹೇಳಿದೆ. ಎಸ್ಸಿ ಎಸ್ಟಿಗೆ ಮಾಡ್ತೇವಿ, ಹಿಂದುಳಿದ ವರ್ಗದವರಿಗೆ ಮಾಡ್ತೇವಿ.ಎಲ್ಲ ಜನಾಂಗದವರನ್ನ ರಕ್ಷಣೆ ಮಾಡಬೇಕು ಮಾಡ್ತೇವಿ. ಎಲ್ಲರಿಗೂ ಸಮ ಪಾಲು ಸಮಬಾಳು ಎಂದ ಡಿಕೆಶಿ