ಪರಿಸರ ರಕ್ಷಣೆಯ ವಿಚಾರದಲ್ಲಿ ರಾಜಿ ಬೇಡ.ಅದನ್ನು ತಾಯಿಯಂತೆ ಪೂಜಿಸಿ ಸಂರಕ್ಷಿಸಬೇಕು : ಭೀಮಾಶಂಕರ ಪಾಟೀಲ್

  • Shivaraj Bandigi
  • 15 Jan 2024 , 2:50 AM
  • Koppal
  • 203

ಗಂಗಾವತಿ :- ಪರಿಸರ ರಕ್ಷಣೆಯ ವಿಚಾರದಲ್ಲಿ ನಾಗರಿಕರು ಬೇಜವಾಬ್ದಾರಿಯಿಂದ ವರ್ತಿಸದೆ ಅದನ್ನು ತಾಯಿಯಂತೆ ಪೂಜಿಸಿ ರಕ್ಷಿಸುವ ಕೆಲಸ ಮಾಡಬೇಕು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿದರು.

ನಗರದಲ್ಲಿ ಪಕ್ಷದ ನಗರ ಯುವ ಘಟಕದ ಅಧ್ಯಕ್ಷ 
ರಮೇಶ ಹೊಸಮಲಿ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ನೆಟ್ಟು ಮಾತನಾಡಿದ ಅವರು ಪರಿಸರ ರಕ್ಷಣೆ ಇಂದು ಮನುಷ್ಯನ ಪ್ರಾಣದಷ್ಟೇ ಮಹತ್ವವಾಗಿದೆ.ಜೀವ ಸಂಕುಲ ನಿಂತಿರುವುದೇ ಪರಿಸರದ ಮೇಲೆ ಅದನ್ನು ನಮ್ಮ ಸ್ವಾರ್ಥಕ್ಕೆ ದುರ್ಬಳಕೆ ಮಾಡಿಕೊಂಡರೆ ಮನುಷ್ಯ ಸೇರಿದಂತೆ ಪ್ರಾಣಿ ಸಂಕುಲಕ್ಕೆ ಬಹು ದೊಡ್ಡ ಅಪಾಯ ಎದುರಾಗುತ್ತದೆ.ಅದನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದರು.
ಜಿಲ್ಲಾಧ್ಯಕ್ಷರಾದ ಮನೋಹರ ಗೌಡ,ಯುವ ಘಟಕ ಪ್ರಧಾನಕಾರ್ಯದರ್ಶಿ ರಾಜೇಶ ರೆಡ್ಡಿ, ನಗರ ಘಟಕದ ಅಧ್ಯಕ್ಷ ವಿರೇಶ ಬಲಕುಂದಿ,ಯುವ ಘಟಕದ ಜಿಲ್ಲಾಧ್ಯಕ್ಷ ಚಂದ್ರು ಹಿರಿಯೂರು,ಯುವ ಘಟಕದ ನಗರ ಅಧ್ಯಕ್ಷ ರಮೇಶ ಹೊಸಮಲಿ,ನಗರ ಮಹಿಳಾ ಅಧ್ಯಕ್ಷಿಣಿ ಶ್ರೀಮತಿ ಭಾರತಿ,ಕೌಸರ್ ಬಾನು,ಮಲ್ಲಿಕಾರ್ಜುನ ಸೇರಿದಂತೆ ಯುವ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು

Read All News