ಪ್ರಾಣ ಬಿಡ್ತೀನಿ ಕಾಂಗ್ರೆಸ್ ಗೆ ಹೋಗಲ್ಲ! ರಮೇಶ್ ಜಾರಖಿಹೋಳಿ ಪ್ರತಿಕ್ರಿಯೆ

  • Shivaraj Bandigi
  • 14 Jan 2024 , 11:37 PM
  • Belagavi
  • 178

ಚಿಕ್ಕೋಡಿ : ವಿಧಾನ ಸಭಾ ಚುನಾವಣೆ ಬಳಿಕ ಸೈಲೆಂಟ್ ಆಗಿದ್ದ ಗೋಕಾಕ ಶಾಸಕ ರಮೇಶ ಜಾರಖಿಹೋಳಿ ಅಥಣಿಯಲ್ಲಿ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ಯ ಆಗಮಿಸಿದ ಮಾಜಿ ಸಚಿವ ಹಾಲಿ ಗೋಕಾಕ್ ಶಾಸಕ ರಮೇಶ ಜಾರಖಿಹೋಳಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಥಣಿ ಶಾಸಕ ಲಕ್ಷ್ಮಣ್ ಸವದಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಿಜೆಪಿಗೆ ಆಹ್ವಾನ ನೀಡಿದ ವಿಚಾರಕ್ಕೆ  ಸ್ವಯಂ ಘೋಷಿತ ನಾಯಕರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ  ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತಿಗೆ ರಮೇಶ ಜಾರಖಿಹೋಳಿ ತಿರುಗೇಟು   ನೀಡಿದಿದ್ದಾರೆ.

ಬಿಜೆಪಿ ಪಕ್ಷದ ಬಗ್ಗೆ ನನಗೆ ಹೆಮ್ಮೆ ಇದೆ ಕಾಂಗ್ರೆಸ್ ಪಕ್ಷಕ್ಕೆ ನನ್ನ ತಲೆ ಹೋದ್ರು ನಾನು ಹೋಗಲ್ಲ ಎಂದು ಶಾಸಕ ರಮೇಶ ಜಾರಖಿಹೋಳಿ  ಹೇಳಿಕೆ ನೀಡಿದ್ದಾರೆ.

Read All News