ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಸರಕಾರದಿಂದ ಆಚರಿಸಿದ್ದಕ್ಕೆ ಸಿಎಂ ಬೊಮ್ಮಾಯಿ ಅವರನ್ನು ಅಭಿನಂದಿಸಿದ ಡಾ. ಸಿ ಸೋಮಶೇಖರ

  • Shivaraj Bandigi
  • 5 Jan 2024 , 11:29 PM
  • Belagavi
  • 1086

ಬೆಳಗಾವಿ :  ಶ್ರೀ ಜಗದ್ಗುರು ರೇಣುಕಾಚಾರ್ಯರು ಸಮುದಾಯಕ್ಕೆ ಮಾನವೀಯತೆಯ ಸಂದೇಶವನ್ನು ಸಾರಿರುವವರು ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ರೇಣುಕರ ತತ್ವವನ್ನ ಬದುಕಿನಲ್ಲಿ ಅಳವಡಿಸಿಕೊಂಡಾಗ ಶಾಂತಿ ಸಮಾಧಾನ ಸಿಗಲು ಸಾಧ್ಯ ಕರ್ನಾಟಕ ಘನ ಸರಕಾರದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಆಚರಿಸಲು ಆದೇಶ ಹೊರಡಿಸಿದ ಕ್ರಿಯಾಶೀಲ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ನಾವೆಲ್ಲ ಅಭಿನಂದಿಸಲೇಬೇಕು ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಸಿ ಸೋಮಶೇಖರ್ ಅವರು ನಗರದ ಲಕ್ಷ್ಮಿ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಪ್ರಾಂಗಣದಲ್ಲಿ ಮಾರ್ಚ್ 1ರಿಂದ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯ 5ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹುಕ್ಕೇರಿ ಹಿರೇಮಠ ನಾಡು ನುಡಿ ಮತ್ತು ಧರ್ಮವನ್ನ ಬಿತ್ತುವ ಮಠ ಎಂದರು.

ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆಯವರು ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡುತ್ತಾ ಪ್ರತಿವರ್ಷ ರೇಣುಕಾಚಾರ್ಯ ಜಯಂತಿಯಲ್ಲಿ ನಾನು ಭಾಗಿಯಾಗುತ್ತೇನೆ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಎಲ್ಲಾ ಸಮುದಾಯದವರಿಗು ಕೂಡ ಮಾರ್ಗದರ್ಶನ ಮಾಡುತ್ತಿದ್ದಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಆಚರಿಸಲು ಆದೇಶ ಹೊರಡಿಸಿದೆ ಅನೇಕ ಭಾಗಗಳಲ್ಲಿ ಇಂದು ಆಚರಿಸಿದ್ದೆವೆ ಇವತ್ತು ಕೂಡ ಬೆಳಗಾವಿಯಲ್ಲಿ ಸಾಂಕೇತಿಕವಾಗಿ ಆಚರಿಸಿ ಮಾರ್ಚ 16 ರಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಾವೆಲ್ಲರೂ ಸನ್ನದ್ದರಾಗಿದ್ದೆವೆ ಎಂದರು.

ಸಾನಿಧ್ಯ ವಹಿಸಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನ ಈಗಾಗಲೇ ಜಿಲ್ಲೆಯ ಅನೇಕ ಕಡೆ ಆಚರಿಸಿದ್ದೆವೆ ಇವತ್ತು ಬೆಳಗಾವಿ ನಗರದಲ್ಲಿ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಿ ರೇಣುಕಾಚಾರ್ಯ ಆಶಿರ್ವಾದ ಪಡೆಯಲು ಸಂತಸವಾಗುತ್ತಿದೆ ಎಂದರು .

 

ರಂಗಾಯಣದ ನಿರ್ದೇಶಕರಾದ ರಮೇಶ್ ಪರವಿನಾಯ್ಕರ ಅವರಿಗೆ ಸನ್ಮಾನಿಸಿ ಆಶಿರ್ವದಿಸಲಾಯಿತು. 

ಈ ಸಂದರ್ಭದಲ್ಲಿ ಬೇರೆ ಬೇರೆ ಸಂಪ್ರದಾಯದ ದಂಪತಿಗಳಿಗೆ ಸನ್ಮಾನಿಸಲಾಯಿತು.

ಮುಕ್ತಾರ ಹುಸೆನ ಪಠಾನ್ ಅವರ ಕುಟುಂಬಕ್ಕೆ ಸನ್ಮಾನ ಮಾಡಲಾಯಿತು. 

ವಿರೂಪಾಕ್ಷಯ್ಯ ನಿರಲಗಿಮಠ ಅವರು ನಿರೂಪಿಸಿದರು,

ಬೆಳಗಾವಿ ನಗರದ ನೂರಾರು ಪುರೋಹಿತರು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯಲ್ಲಿ ರೇಣುಕರಿಗೇ ವಿಶೇಷ ಪೂಜೆ ಸಲ್ಲಿಸಿದರು ,

ವಿಜಯ ಶಾಸ್ತ್ರೀಗಳು ಗಳು .ಚಂದ್ರಶೇಖರ ಸವಡಿ ಇನ್ನೂ ಅನೇಕರು ಉಪಸ್ಥಿತರಿದ್ದರು

Read All News