ಬೈಲಹೊಂಗಲ : ಶನಿವಾರ ಡೆಹರಾಡೂನ್ ನಲ್ಲಿ ಜರುಗಿದ 61ನೇ ಭಾರತೀಯ ಫಿಜಿಯೋತೆರಪಿಸ್ಟ್ ವೈದ್ಯಕೀಯ ಸಂಘದ ರಾಷ್ಟ್ರೀಯ ಕಾನ್ಫರೆನ್ಸಿನಲ್ಲಿ ಬೈಲಹೊಂಗಲ ಪಟ್ಟಣದ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯ ಫಿಜಿಯೋತೆರಪಿ ವೈದ್ಯ ಡಾ. ಸಂತೋಷ ಮೆಟಗುಡ್ ಪ್ರತಿಷ್ಠಿತ ಫೆಲೋಶಿಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ಹಾಗೂ ಭಾನುವಾರ ಜರುಗಿದ ರಾಷ್ಟ್ರ ಮಟ್ಟದ ವೈಜ್ಞಾನಿಕ ಕಾಗದದ ಪ್ರಸ್ತುತಿ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಇವರ ಸೇವೆ, ಸಾಧನೆ ಗುರುತಿಸಿ ಉತ್ತರಾಖಂಡ ರಾಜ್ಯಪಾಲರಾದ ಶ್ರೀ ಗುರ್ಮೀತ್ ಸಿಂಗ್ ಈ ಪ್ರಶಸ್ತಿಯನ್ನು ನೀಡಿದರು.
ದೇಶದ ಸಾವಿರಾರು ವೈದ್ಯರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಬೈಲಹೊಂಗಲ ಪಟ್ಟಣದ ಡಾ. ಸಂತೋಷ ಮೆಟಗುಡ್ ಅವರಿಗೆ ಪ್ರಶಸ್ತಿ ದೊರೆತದ್ದು ನಾಡಿಗೆ ಹೆಮ್ಮೆಯ ಗರಿಯಾಗಿದೆ ಎಂದು ಮಠಾಧೀಶರು, ಗಣ್ಯರು, ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಹಾಗೂ ಹಲವಾರು ಸಂಘ ಸಂಸ್ಥೆಗಳು ಇವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಇವರು ಬೈಲಹೊಂಗಲ ಪಟ್ಟಣದ ಕೆ.ಆರ್.ಸಿ.ಇ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಸಿ.ಎಮ್. ಮೆಟಗುಡ್ ಇವರ ಪುತ್ರ.
ವರದಿ : ರವಿಕಿರಣ್ ಯಾತಗೇರಿ