ಬೆಳಗಾವಿ :ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಬೆಂಗಳೂರಿನಲ್ಲಿ ಭೇಟಿಯಾಗಿ ಅಭಿನಂದನೆಯನ್ನು ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಪ್ರಭಾಕರ ಕೋರೆಯವರು ರಾಜ್ಯದಲ್ಲಿ ಬಿಜೆಪಿ ಪಕ್ಷವು ಇಂದು ಅಧಿಕಾರದಲ್ಲಿ ಬರಲು ಬಿ.ಎಸ್.ಯಡಿಯೂಪ್ಪನವರ ಪಾತ್ರ ಅತ್ಯಂತ ಹಿರಿದಾದುದು. ಪಕ್ಷ ಸಂಘಟನೆಯಲ್ಲಿ ಅಹರ್ನಿಶಿಯಾಗಿ ಶ್ರಮಿಸಿದವರು.
ನಮ್ಮೆಲ್ಲರ ಧೀಮಂತ ನಾಯಕರಾಗಿರುವ ಅವರಿಗೆ ಕೇಂದ್ರ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ಆಯ್ಕೆಮಾಡಿರುವುದು ಹರ್ಷವನ್ನುಂಟುಮಾಡಿದೆ ಎಂದು ಹೇಳಿದರು.