70 ಲಕ್ಷ ರೂ,ಗಳ ವೆಚ್ಚದಲ್ಲಿ ಖನಗಾಂವ ಕೆ ಎಚ್ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆ

  • 8 Jan 2024 , 8:12 PM
  • Belagavi
  • 132

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಖನಗಾಂವ ಕೆ ಎಚ್ ಗ್ರಾಮಕ್ಕೆ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ 70 ಲಕ್ಷ ರೂ. ಮಂಜೂರಾಗಿದ್ದು, ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಹಾಗೂ ಗ್ರಾಮಸ್ಥರು ಸೇರಿ ಭೂಮಿ ಪೂಜೆಯನ್ನು ನೆರವೇರಿಸಿದ ಚಾಲನೆಯನ್ನು ನೀಡಿದರು.

ಪ್ರತಿಯೊಂದು ಗಲ್ಲಿ ಗಲ್ಲಿಗಳಲ್ಲಿ‌ ಪೈಪಲೈನ್ ಅಳವಡಿಕೆಯಾಗಲಿದ್ದು, ಮನೆ ಮನೆಗೆ ನಲ್ಲಿಗಳ ಮೂಲಕ ನೀರು ಸರಬುರಾಜು ಆಗಲಿದೆ.

ಈ ಸಮಯದಲ್ಲಿ ಗ್ರಾಮದ ಹಿರಿಯರು, ಮಹೇಶ ಸುಗೆನ್ನವರ, ಬಾಳು ಗಿರಿಯಾಲ್ಕರ್, ಮಹಾಂತೇಶ ಸುತಾರ, ಯಲ್ಲಪ್ಪ ಕುರುಬರ, ಸಿದ್ದರಾಯಿ ಪಾಟೀಲ, ಪ್ರಕಾಶ ಪಾಟೀಲ, ಗ್ರಾಮದ ಪಂಚ ಕಮೀಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read All News