ಕೇಂದ್ರದಿಂದ ಬರ ಪರಿಹಾರ ಬರಬೇಕು

  • shivaraj bandigi
  • 15 Jan 2024 , 1:29 AM
  • Belagavi
  • 513

ಬೆಳಗಾವಿ

ಬರ ಪರಿಹಾರ ಕೇಂದ್ರ ಸರಕಾರದಿಂದಲೂ ಬರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಸರಕಾರದಿಂದ ಬರ ಪರಿಹಾರ ಕೊಡುವುದಾಗಿ ಹೇಳಿದರೂ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾವಾಗಲೂ ಬರಗಾಲ ಎದುರಾದಾಗ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಸಹಾಯ ಮಾಡಲೇಬೇಕು‌‌. ಅಲ್ಲಿ ಒತ್ತಡ ತರಬೇಕಲ್ವ? ಲೋಕಸಭೆಯಲ್ಲಿ ಬಿಜೆಪಿಯವರು ಯಾರಾದರೂ ಮಾತನಾಡಿದ್ದಾರಾ? ರಾಜ್ಯ ಸರಕಾರದ ಸಚಿವರು ಹೋದರೆ ಒಬ್ಬರು ಕೇಂದ್ರ ಸಚಿವರು ಸಿಗುತ್ತಿಲ್ಲ. ಕೃಷ್ಣ ಬೈರೇಗೌಡ, ಚಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ ಹೋದಾಗ ಯಾರೂ ಭೇಟಿ ನೀಡಿಲ್ಲ.ಇದನ್ನು ಬಿಜೆಪಿಯವರಿಗೆ ಕೇಳಿ. ಶಾಸಕರಿಗೆ ಅನುದಾನ ಕೊಡೋಕೆ ಬರಲ್ಲ, ಇಲಾಖೆ ಮೂಲಕ ದುಡ್ಡು ಕೊಡುತ್ತಾರೆ. ಕಳೆದ ವರ್ಷದಲ್ಲಿ ಅಭಿವೃದ್ಧಿಗೆ ಎಷ್ಟು ಅನುದಾನ ಇತ್ತು. ಈ ವರ್ಷ ಎಷ್ಟಿದೆ ನಮ್ಮ ಬಜೆಟ್‌ನಲ್ಲಿ ಇದೆ. ಇವರು ನಾಲ್ಕು ವರ್ಷಗಳ ಕಾಲ ಎಷ್ಟು ಖರ್ಚು ಮಾಡಿದ್ದಾರೆ ನಾವೆಷ್ಟು ಖರ್ಚು ಮಾಡಿದ್ದೇವೆ ಎಂದರು.

ಸದನದಲ್ಲಿ ಬಿಜೆಪಿಯವರು ಯಾವ ಕಾರಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಜಮೀರ್ ಅವರ ಬಗ್ಗೆ ಇಡೀ ಒಂದ್ ದಿನ ಹೋಯಿತು. ಅದರಿಂದ ಏನ್ ಲಾಭ ಆಯಿತು ಅವರಿಗೆ, ಉತ್ತರ ಕರ್ನಾಟಕ ಜನತೆಗೆ ಏನ್ ಲಾಭ ಆಯಿತು. ಒಂದು ದಿವಸ ಸದನ ನಡೆಯದ ಹಾಗೇ ನಡೆದುಕೊಂಡರಲ್ಲ. ವಿಪಕ್ಷ ಸಲುವಾಗಿ ಏನ್ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಳ್ಳುತ್ತೀರಾ ಎಂದುಬಅವರನ್ನು ಕೇಳಬೇಕು ಎಂದರು.

ನಾವು ಸದನದಲ್ಲಿ ಮಾತನಾಡಲು ಅವಕಾಶ ಸಮಯ ಕೊಟ್ಟು ಮನವಿ ಮಾಡಿದ್ದೇವೆ. ವಿಪಕ್ಷ ನಾಯಕರಿಗೆ ಸಿಎಂ ಮನವಿ ಮಾಡಿದರೂ ಚರ್ಚೆ ಮಾಡಲಿಲ್ಲ ಅಂದ್ರೆ ಅದು ನಮ್ಮ ತಪ್ಪಲ್ಲ. ನಮಗೆ ಜಿಎಸ್‌ಟಿ ದುಡ್ಡು ಬರುತ್ತಿಲ್ಲ. ದಕ್ಷಿಣ ಭಾರತ ರಾಜ್ಯಗಳ ದುಡ್ಡು ಉತ್ತರ ಭಾರತ ರಾಜ್ಯಗಳಿಗೆ ಹೋಗುತ್ತಿದೆ ಎಂದು ಸಚಿವರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಇದರ ವಿರುದ್ಧ ಅವರು ಪ್ರತಿಭಟನೆ ಮಾಡಬೇಕು ಎಂದರು.

Read All News