ಕರ್ನಾಟಕ ಎಲೆಕ್ಷನ 2023 ಡೇಟ್ಸ್ ಫಿಕ್ಸ್ : ಇಲ್ಲಿದೆ ಮಾಹಿತಿ

  • Krishna Shinde
  • 14 Jan 2024 , 10:31 PM
  • Bengaluru
  • 353

ಬೆಂಗಳೂರು : ಮುಂಬರುವ ಕರ್ನಾಟಕ ಎಲೆಕ್ಷನ್ 2023 ಸಲುವಾಗಿ ಸುದ್ದಿ ಗೋಷ್ಠಿ ನಡೆಸಿದ ಚುನಾವಣೆ ಆಯೋಗ ಅನೇಕ ಮಾಹಿತಿಗಳನ್ನು ನೀಡಿದೆ.

2011ರ ಜನ ಗಣತಿಯ ಪ್ರಕಾರ ಕರ್ನಾಟಕದ ಜನಸಂಖ್ಯೆ 6.1 ಕೋಟಿಯಾಗಿದೆ ಎಂದು ಹೇಳಿದ್ದಾರೆ ಮತ್ತು ಕರ್ನಾಟಕ ಶಾಸಕಾಂಗ ಸಭೆಯ ಅವಧಿ 24 ಮೇ 2023ವರೆಗೆ ಇದೆ ಆದ್ದರಿಂದ ಈ ಅವಧಿಯ ಮುಂಚೆಯೇ ಎಲೆಕ್ಷನ್ ಮುಗಿಯಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.

ಅಂಗವಿಕಲರಿಗೆ ಮತ್ತು ವೃದ್ದರಿಗೆ ಅನುಕೂಲವಾಗುವಂತೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಮನೆಯಿಂದ ವೋಟ ಮಾಡುವ  ಅವಕಾಶ ಎಲೆಕ್ಷನ ಕಮಿಷನ ನೀಡಿದೆ.

ಕರ್ನಾಟಕ IT ಹಬ ಆಗಿದ್ದು ಈ ಬಾರಿಯ ಎಲೆಕ್ಷನನಲ್ಲಿ ಹೊಸ ಟೆಕ್ನಾಲಜಿ ಬಳಕೆ ಮಾಡುವುದಾಗಿ ಆಯೋಗ ಹೇಳಿದೆ.

KYC (Know your candidate)

ಕ್ರಿಮಿನಲ್ ರೆಕಾರ್ಡ್ ಇರುವ ಅಭ್ಯರ್ಥಿಗಳ ಪಟ್ಟಿಯನ್ನು ಈ affidavit.eci.gov.inನಲ್ಲಿ ಲಿಸ್ಟ್ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.

ಪ್ರತಿ ಅಭ್ಯರ್ಥಿಗಳು ಕನಿಷ್ಟ 3 ನ್ಯೂಸ್ ಪೇಪರಗಳಲ್ಲಿ ತಮ್ಮ ಕ್ರಿಮನಲ್ ಚರಿತ್ರೆ ಬಗ್ಗೆ ಪಬ್ಲಿಶ್ ಮಾಡಲೇ ಬೇಕು ಎಂದು ಆಯೋಗ ಹೇಳಿದೆ ಮತ್ತು ಈ ಪೋರ್ಟಲ್ ಪ್ರತಿ ಅಭ್ಯರ್ಥಿಗಳ ಆಸ್ತಿಪಾಸ್ತಿಯ ಫುಲ್ ಡೀಟೇಲ್ಸ್ ಹೊಂದಿದೆ ಎಂದು ಹೇಳಿದೆ.

ಪ್ರತಿ ಪಾರ್ಟಿ ತಮ್ಮ ವೆಬಸೈಟ್ ಮತ್ತು ನ್ಯೂಸ್ ಪೇಪರನಲ್ಲಿ ತಾವು ಕ್ರಿಮಿನಲ ಬ್ಯಾಕಗೌಂಡ ಇರುವ ಅಭ್ಯರ್ಥಿಗೆ ಯಾಕೆ ಟಿಕೆಟ್ ನೀಡುತಿದ್ದೇವೆ ಎಂದು ಸಂಕ್ಷಿಪ್ತವಾಗಿ ಪಬ್ಲಿಷ ಮಾಡಲೇ ಬೇಕು ಎಂದು ಆಯೋಗ ಹೇಳಿದೆ.


cvigil mobile app

cvigil: citygen vigilant app

ಈ app ಮೂಲಕ ಪ್ರತಿ ನಾಗರಿಕರು ತಮ್ಮ ಸುತ್ತ ಮುತ್ತ ನಡೆಯುತ್ತಿರುವ ಅನೈತಿಕ ಕೆಲಸ ಅಥವಾ ಅನ್ಯಾಯ ಅಂದರೆ ಹಣ ಹಂಚುವುದು,ಗಿಫ್ಟ್ ಕೊಡುವುದು ಮುಂತಾದ ಕಾನೂನಿಗೆ ವಿರೋಧವಾದ ಕೆಲಸಗಳು ನಡೆದರೆ ಫೋಟೋ ತೊಗೊಂಡು appನಲ್ಲಿ ಅಪ್ಲೋಡ ಮಾಡಲು ತಿಳಿಸಿದೆ ಮತ್ತು ಮಾಹಿತಿ ಕೊಟ್ಟವರ ಹೆಸರನ್ನು ಗುಪ್ತವಾಗಿ ಕಾಪಾಡಲಾಗುತ್ತದೆ ಮತ್ತು ಪ್ರತಿ ಕಂಪ್ಲೇಂಟ್ 100 ನಿಮಿಷದಲ್ಲಿ ಪರಿಹರಿಸಲಾಗುತ್ತದೆ ಎಂದು ಆಯೋಗ ಹೇಳಿದೆ.

ಪ್ರತಿ ಪಕ್ಷಗಳಿಗೆ ಮನಿ ಪವರ್ ತೋರಿಸದಂತೆ ಸ್ಟ್ರಿಕ್ಟ್ ವಾರ್ನಿಂಗ ಮಾಡಿದ ಆಯೋಗ ಅಂಥವರ ವಿರುದ್ದ ಕಠಿಣ ಕ್ರಮ ತೆಗೆದು ಕೊಳ್ಳುವುದಾಗಿ ಹೇಳಿದೆ.

ಕರ್ನಾಟಕ ಎಲೆಕ್ಷನ್ 2023

ನಾಮಿನೇಷನ್ ಮಾಡಲು 20 ಏಪ್ರಿಲ್ ಕೊನೆಯ ದಿನಾಂಕ

ಮೇ 10ಕ್ಕೆ ಚುನಾವಣೆ ನಡೆಸಲಾಗುವುದು. 

ಕೌಂಟಿಂಗ್ 13 ಮೇಗೆ ನಡೆಯುವುದು.

Read All News