ಬೆಳಗಾವಿ: ಕಾರ್ಮಿಕ್ ವರ್ಗದ ಮಹಾನ್ ನಾಯಕರು ಹಾಗೂ ಈ ಯುಗದ ಶ್ರೇಷ್ಠ ಮಾರ್ಕ್ಸವಾದಿ ಚಿಂತಕರಾದಕಾಮ್ರೇಡ್ ಶಿವದಾಸ್ ಘೋಷ್‌ಅವರ ವಿಚಾರಗಳನ್ನು ಜನಸಾಮಾನ್ಯರ ಎದೆಗೆ ದಾಟಿಸುವುದು ಇಂದಿನ ತುರ್ತು ಎಂದು ಎಸ್‌ಯುಸಿಐ ಕಮ್ಯೂನಿಷ್ಟ್ ಪಕ್ಷದರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾಮಾಂಜನಪ್ಪ ಆಲ್ದಳ್ಳಿ ಹೇಳಿದರು.
ಅವರು ನಗರದಕನ್ನಡ ಸಾಹಿತ್ಯ ಭವನದಲ್ಲಿ ಎಸ್‌ಯುಸಿಐ ಕಮ್ಯೂನಿಷ್ಟ್ ಪಕ್ಷದಜಿಲ್ಲಾ ಸಮೀತಿಯು ಹಮ್ಮಿಕೊಂಡಿದ್ದ ಶಿವದಾಸ್ ಘೋಷ್‌ಜನ್ಮ ಶತಮಾನೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಕಾಮ್ರೆಡ್ ಶಿವದಾಸ್ ಘೋಷ್ ಅವರು ತಮ್ಮ 13ನೇ ವಯಸ್ಸಿನಲ್ಲಿಯೇ ಭಾರತ ಸ್ವಾತಂತ್ರ್ಯದ ಹೋರಾಟಕ್ಕೆ ಧುಮುಕಿದರು. ಬಂಗಾಳದ ಕ್ರಾಂತಿಕಾರಿ ಸಂಘಟನೆ ಅನುಶೀಲನ ಸಮೀತಿಯಲ್ಲಿ ಸಕ್ರಿಯರಾಗಿದ್ದರು.
ರಷ್ಯಾದಲ್ಲಿ ಸಂಬವಿಸಿದ ಸಮಾಜವಾದಿ ಕ್ರಾಂತಿಯಿಂದ ಪ್ರಭಾವಿತರಾಗಿದ್ದ ನೇತಾಜಿ, ಭಗತ್‌ಸಿಂಗ್ ಅವರು ಭಾರತದಲ್ಲಿಯೂ ಸಮಾಜವಾದಿ ಕ್ರಾಂತಿಯಾಗಬೇಕೆಂದು ಬಯಸಿದ್ದರು. ಅದರ ಮುಂದುವರಿಕೆಯಾಗಿಶಿವದಾಸ್ ಘೋಷ್‌ಅವರು, ಕ್ರಾಂತಿಯಾಗಲು ಸರಿಯಾದಚಿಂತನೆ ಮತ್ತು ಸಂಘಟನೆಯ ಹುಡುಕಾಟದಲ್ಲಿದ್ದರು. ಅಂದಿನ ಅವಿಭಜಿತ ಸಿಪಿಐ ನಿಜವಾದಕಮ್ಯೂನಿಷ್ಟ್ ಪಕ್ಷವಲ್ಲವೆಂದು ಅರಿತ ಅವರು, ತಮ್ಮ ಬೆರಳೆಣಿಕೆಯ ಸಂಗಾತಿಗಳೊಂದಿಗೆ ಎಸ್‌ಯುಸಿಐ ಕಮ್ಯೂನಿಷ್ಟ್ ಪಕ್ಷವನ್ನು ಸ್ಥಾಪಿಸಿದರು.
ಹೊಸ ಮೌಲ್ಯಗಳು, ಹೊಸ ಕಮ್ಯೂನಿಷ್ಟ್ ಸಂಸ್ಕೃತಿಯೊಂದಿಗೆ ಪಕ್ಷ ಇಂದು ದೇಶದ 26 ರಾಜ್ಯಗಳಲ್ಲಿ ಕ್ರಿಯಾಶೀಲವಾಗಿದೆ. ಶೋಷಿತರು, ಕಾರ್ಮಿಕರು, ರೈತರುತಮ್ಮ ವಿಮೋಚನೆಗಾಗಿ ಪಕ್ಷದೆಡೆಗೆ ಮುಖ ಮಾಡುತ್ತಿದ್ದಾರೆ. ಸೋವಿಯೆತ್ ಕ್ರಾಂತಿಯರೂವಾರಿ ಲೆನಿನ್ ಅವರು ಹೇಳಿದಂತೆ ಒಂದು ನೈಜಕಮ್ಯೂನಿಷ್ಟ ಪಕ್ಷವಿಲ್ಲದೇಕ್ರಾಂತಿ ಸಾಧ್ಯವಿಲ್ಲ. ಹಾಗಾಗಿ ಭಾರತದಲ್ಲಿ ಕಾಮ್ರೇಡ್ ಶಿವದಾಸ್ ಘೋಷರ ಚಿಂತನೆಗಳ ಬಲದಿಂದ ನೈಜಕಮ್ಯೂನಿಷ್ಟ್ ಪಕ್ಷವಾಗಿ ನಮ್ಮ ಪಕ್ಷ ಹೊರಹೊಮ್ಮಿದೆ ಎಂದು ರಾಮಾಂಜನಪ್ಪ ಸಂತಸ ವ್ಯಕ್ತಪಡಿಸಿದರು.
‘ಈ ಹಿನ್ನೆಲೆಯಲ್ಲಿ ವರ್ಷವಿಡೀ ಶಿವದಾಸ್ ಘೋಷರಕುರಿತು ಕರ‍್ಯಕ್ರಮಗಳನ್ನು, ಚಿಂತನ ಶಿಬಿರಗಳನ್ನು ಹಮ್ಮಿಕೊಳ್ಳುವುದರ ಮೂಲಕ ಅವರ ವಿಚಾರಗಳನ್ನು ಜನಸಾಮಾನ್ಯಕಡೆಗೆಒಯ್ಯುವುದೇ ನಮ್ಮಆದ್ಯಕರ್ತವ್ಯವಾಗಬೇಕು’ ಎಂದು ಕರೆ ನೀಡಿದರು. ಎಸ್‌ಯುಸಿಐ ಕಮ್ಯೂನಿಷ್ಟ್ ಪಕ್ಷದ ಮುಖಂಡ, ಲಕ್ಷ್ಮಣಜಡಗನ್ನವರಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಮ್ರೇಡ್ ಶಿವದಾಸ ಘೋಷರ ಚಿಂತನೆಗಳು ಎಂದಿಗಿಂತಇವತ್ತು ಪ್ರಸ್ತುತತೆಯನ್ನು ಹೊಂದಿವೆ ಎಂದರು. ಪಕ್ಷದ ಸದಸ್ಯರಾದ ಲಕ್ಕಪ್ಪ ಬಿಜ್ಜನ್ನವರ, ರಾಜುಗಾಣಗಿ ವೇದಿಕೆಯಲ್ಲಿದ್ದರು. ಪಕ್ಷದ ಬೆಂಬಲಿಗರು ಭಾಗವಹಿಸಿದ್ದರು.