ಬೆಂಗಳೂರು : ಕಾಂಕ್ರೀಟ್ ಕಾಡುಗಳ ಮಧ್ಯೆ ಜನ ವೇಗದ ಜೀವನಶೈಲಿ ನಡೆಸುತ್ತಿರುವ ಪರಿಣಾಮ ಆರೋಗ್ಯದಂತ ಸಮಸ್ಯೆ ಹೆಚ್ಚಾಗುತ್ತಿದ್ದು ಇದಕ್ಕೆ ಪರಿಸರ ಸಂರಕ್ಷಣೆ ಒಂದೇ ಪರಿಹಾರ ಎಂದು ಪ್ರಾಂಶುಪಾಲರದ ಜೆ.ಎಸ್ ಸಂತೋಷ ಅಭಿಪ್ರಾಯಪಟ್ಟರು.
ನಗರದ ಅತ್ತಿಬೆಲೆಯಲ್ಲಿರುವ ಎ ಕಿಡ್ಜ್ ಪ್ರಿ ಸ್ಕೂಲ್ ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಇವರು. ಈ ಜಗತ್ತಿನಲ್ಲಿ ಜೀವಿಸುವ ಪ್ರತಿಯೊಂದು ಜೀವಿಗೂ ಆಧಾರವಾಗಿರುವುದು ಪರಿಸರ. ಗಾಳಿ, ನೀರು ಸೇರಿದಂತೆ ನಾವು ಸೇವಿಸುವ ಅನ್ನದ ಅಗಳು ಪ್ರಕೃತಿ ನೀಡಿದ ಭಿಕ್ಷೆ. ನಮ್ಮ ಮುಂದಿನ ತಲೆಮಾರಿನ ಪೀಳಿಗೆಗೆ ಉತ್ತಮ ಆರೋಗ್ಯ ಸಿಗಬೇಕಾದರೆ ಇಂದು ನಾವೆಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಪರಿಸರದ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು. ಶಾಲೆಯ ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.