ಮೂರು ವರ್ಷವಾದರೂ ಇನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊರಕದ ಸೈಕಲ್ ಭಾಗ್ಯ
15 Jan 2024 , 2:06 AM
Belagavi
469
ಭೇಟಿ ಪಡಾವೋ... ಭೇಟಿ ಬಚಾಯೋ... ಪ್ರಧಾನಿಯವರ ಮಾತು ಬರಿ ಪ್ರಚಾರಕ್ಕಾ…? ಅಥಣಿ : ಸತತ ಎರಡು ವರ್ಷ್ ಕೋವಿಡ್ ಆತಂಕದಲ್ಲಿ ಇಡೀ ವಿಶ್ವವೇ ನಲುಗಿ ಹೋಗಿದೆ ಅದರಲ್ಲೂ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಸಾಕಷ್ಟು ಪರಿಣಾಮವಾದದ್ದು ಉಂಟು ಆದ್ರೆ ಕೋವಿಡ್ ಸಡಿಲಿಕೆ ನಂತರವೂ ವಿದ್ಯಾರ್ಥಿಗಳ ಗೋಳು ಕೇಳದಂತಾಗಿದೆ.
ಅಂದಿನ ಕುಮಾರಸ್ವಾಮಿ ಹಾಗೂ ಯೆಡಿಯೂರಪ್ಪ ಜಂಟಿ ಸರ್ಕಾರ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೈಕಲ್ ನೀಡುವ ಯೋಜನೆ ಜಾರಿಗೆ ತಂದಿತ್ತು ಮಾತಿನಂತೆ ವಿದ್ಯಾರ್ಥಿಗಳಿಗೆ ಸೈಕಲ್ ನೀಡಲಾಗುತ್ತಿತ್ತು ಆದ್ರೆ ಇವತ್ತಿನ ಬಿಜೆಪಿ ಸರ್ಕಾರ್ ಇದನ್ನ ಗಣೇನೆಗೆ ತೆಗೆದುಕೊಂಡಿಲ್ಲ ಎಂದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ವಿದ್ಯಾರ್ಥಿಗಳು ಆಕ್ರೋಶವನ್ನ ಹೊರ ಹಾಕುತಿದ್ದಾರೆ.
ನಮ್ಮ್ ಅಕ್ಕನಿಗೆ ಸೈಕಲ್ ನೀಡಿದ್ರು ನಮಗ್ಯಾಕಿಲ್ಲ ನಾವು ದಿನಾಲೂ ನಾಲ್ಕು km ನಡೆದುಕೊಂಡು ಬರುತ್ತಿದ್ದೇವೆ ಸರ್ಕಾರ್ ನಮಗೆ ಅನ್ನ್ಯಾಯ ಮಾಡುತ್ತಿದೆ ಕೂಡಲೇ ನಮಗೆ ಸೈಕಲ್ ನೀಡಬೇಕೆಂದು ವಿದ್ಯಾರ್ಥಿಗಳು ತಮ್ಮ್ ಅಳಲನ್ನ ತೋಡಿಕೊಂಡಿದ್ದಾರೆ.