ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದ ಮಾಜಿ ಶಾಸಕ ಕುಡುಚಿ

  • 15 Jan 2024 , 2:07 AM
  • Belagavi
  • 241

ಬೆಳಗಾವಿ: ಕೇಂದ್ರದಲ್ಲಿ ಬಿಜೆಪಿ ಸರಕಾರ ಕಳೆದ 8 ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಅವರ ನೀಡಿದ ಭರವಸೆ ಒಂದಾದರೂ ಈಡೇರಿಸಿದ್ದಾರಾ? ಜೆಎಸ್ ಟಿಯಿಂದ ಜನ ಸಾಮಾನ್ಯರ ಮೇಲೆ ಹೊರೆ ಹಾಕುತ್ತಿದ್ದಾರೆ. ಮತದಾರರು ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕೆಂದು ಮಾಜಿ ಶಾಸಕ ರಮೇಶ ಕುಡುಚಿ ಹೇಳಿದರು.

ಶುಕ್ರವಾರ ಕುವೆಂಪು ನಗರದ ಅವರ ನಿವಾಸದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಜಿಎಸ್ ಟಿ ಕುರಿತು ಬಿಜೆಪಿಯವರು ವಿರೋಧ ಪಕ್ಷದಲ್ಲಿ ಇದ್ದಾಗ ವಿರೋಧಿಸಿದ್ದರು. ಈಗ ಜೆಎಸ್ ಟಿ ತರುವ ಮೂಲಕ ಸಾಮಾನ್ಯ ಜನರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಮನವರಿಕೆ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಎಸ್ ಟಿಯಿಂದ ಜನಸಾಮಾನ್ಯರ ಬದುಕು ಮುರಾಬಟ್ಟೆಯಾಗುತ್ತಿದೆ. ದಿನಸಿ ಅಗತ್ಯ ವಸ್ತುಗಳಿಂದ ಹಿಡಿದು ಜಿಎಸ್ ಟಿ ಹೇರಿಕೆ ಮಾಡಿದ್ದಾರೆ ಬಿಜೆಪಿ ಸರಕಾರ. ಶಾಲಾ ಮಕ್ಕಳಿಗೆ ಕೊಡುವ ಪುಸ್ತಕ, ಕಂಪಾಸ್, ಕಲರ್ ಬಾಕ್ಸ್ ಮೇಲೂ 12% ತೆರಿಗೆ ಹಾಕಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿಯೂ ಜಿಎಸ್ ಟಿ ಹೊರೆ ಹಾಕಿ ದೇಶದ ಜನರಿಗೆ ಏನು ಸಂದೇಶ ಕೊಡಲು‌ ಹೊರಟ್ಟಿದ್ದೀರಿ ಎಂದು ಪ್ರಶ್ನಿಸಿದರು‌.

ಕೇಂದ್ರ ‌ಮತ್ತು ರಾಜ್ಯ ಸರಕಾರಕ್ಕೆ ನೀಡುವ ಜೆಎಸ್ ಟಿಯಿಂದ ಮಲ್ಟಿಪಲ್ ಟ್ಯಾಕ್ಸ್ ಸಂಗ್ರಹವಾಗುತ್ತಿದೆ. ಇದು ಯಾರಿಗೆ ಲಾಭವಾಗುತ್ತದೆ ಎನ್ನುವುದನ್ನು ಜನರು ಅರಿತುಕೊಳ್ಳಬೇಕಿದೆ. ಜನರಿಗೆ ಮೂಲಭೂತ ಸೌಕರ್ಯ ಕೊಡುವುದನ್ನು ಬಿಟ್ಟು ಜೆಎಸ್ ಟಿ ಹೇರಿ ಕೂಲಿ, ಕಾರ್ಮಿಕರ ಜೀವನ ಮೂರಾಬಟ್ಟೆ ಮಾಡಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.

Read All News