ಬೆಳ್ಳಂಬೆಳಗೆ ಮದ್ಯದ ಅಂಗಡಿಗಳ ಮೇಲೆ ಅಬಕಾರಿ ದಾಳಿ

  • shivaraj bandigi
  • 26 Jan 2024 , 2:05 PM
  • Belagavi
  • 624

ಬೈಲಹೊಂಗಲ : ಸಾರ್ವಜನಕರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಇಲ್ಲಿನ ಅಬಕಾರಿ ಇಲಾಖೆ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗೆ ಪಟ್ಟಣದ ಮದ್ಯದ ಅಂಗಡಿಗಳ ಮೇಲೆ ದಾಳಿ ನಡೆಸಿದರು. 

ಸನ್ನದು ನವೀಕರಣ, ಹೊಸ ಸನ್ನದು ಪಡೆಯುವ ಸಂದರ್ಭದಲ್ಲಿ ವಿಧಿಸಲಾಗಿದ್ದ ಅಬಕಾರಿ ಇಲಾಖಾ ಸೂಚನೆಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿ, ನಿಗದಿಪಡಿಸಿದ ಅವಧಿಗಿಂತ ಮೊದಲು ಬಾರ್ ಗಳನ್ನು ತೆರೆದು ಮದ್ಯ ಸರಬರಾಜು ಮಾಡುತ್ತಿರುವ ಕೆಲ ಅಂಗಡಿಗಳ ಮೇಲೆ ಸಾರ್ವಜನಿಕರು ಅಬಕಾರಿ ಇಲಾಖೆಗೆ ದೂರು ನೀಡಿದ್ದರು. 

ಇಲಾಖೆಯ ವ್ಯಾಪ್ತಿಯಲ್ಲಿ ಬರುವ CL7 ಬೆಳಿಗ್ಗೆ 9ಕ್ಕೆ, CL2 ಬೆಳಿಗ್ಗೆ 10 ಕ್ಕೆ ಹಾಗೂ ಎಂಎಸ್ ಆಯ್ ಎಲ್ ಮಳಿಗೆ 11ಕ್ಕೆ ತೆರೆದುಮದ್ಯ ಸರಬರಾಜು ಮಾಡುವಂತೆ ಷರತ್ತು ಇದ್ದರೂ ಕೂಡಾ ಬೆಳಗಿನ ಜಾವ 5 ಕ್ಕೆ ಈ ಮಳಿಗೆಗಳು ವ್ಯಾಪಾರ ವಹಿವಾಟು ನಡೆಸುತ್ತಿದ್ದವು ದೂರನ ಹಿನ್ನಲೆಯಲ್ಲಿ ಇಂದು ಅಬಕಾರಿ ನಿರೀಕ್ಷಕ ಬಸವರಾಜ ಮುಂಡಸಿ ನೇತೃತ್ವದಲ್ಲಿ ದಾಳಿ ನಡೆಸಿ ಎಲ್ಲ ಮದ್ಯದ ಮಳಿಗೆಗಳಿಗೆ ನೋಟಿಸ ಜಾರಿ ಮಾಡಲಾಗಿದೆ. 

ವರದಿ : ರವಿಕಿರಣ್  ಯಾತಗೇರಿ

Read All News