ಬೆಳಗಾವಿ :
ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿ ರೈತರಿಗೆ ಸರಕಾರದ ಎರಡು ಸಾವಿರ ರೂ. ಪರಿಹಾರ ಸಾಲುವುದಿಲ್ಲ ಹೆಚ್ಚಿನ ಪರಿಹಾರ ಕೊಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ರೈತರಿಗೆ ಸರಕಾರದ ಎರಡು ಸಾವಿರ ರೂ. ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಸ್ವಲ್ಪ ಮಳೆ ಬಂದಾಗ ರೈತರ ಬೆಳೆ ಬೆಳೆದಿದ್ದರು. ತದ ನಂತರ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಸಂಕಷ್ಟದ್ದಲ್ಲಿದ್ದಾರೆ ಅವರಿಗೆ ಸರಕಾರ ಹೆಚ್ಚಿನ ಪರಿಹಾರ ನೀಡಬೇಕೆಂದರು.
ಈ ಕುರಿತು ಉತ್ತರ ಕರ್ನಾಟಕದ ಶಾಸಕರು ಸಂಬಂಧಿಸಿದ ಸಚಿವರು ಜತೆಗೆ ಚರ್ಚೆ ನಡೆಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗುವುದು ಎಂದರು.