ಸಚಿವ ಶಿವಾನಂದ ಪಾಟೀಲ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ರೈತರಿಂದ ಆಕ್ರೋಶ.

  • shivaraj bandigi
  • 13 Jan 2024 , 8:25 PM
  • Belagavi
  • 551

ಅಥಣಿ : ಸಾಲ ಮನ್ನಾ ಆಗುವುದಕ್ಕೆ ರೈತರು ಬರಗಾಲಕ್ಕೆ ಕಾಯುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿಚಾರವಾಗಿ ಅಥಣಿ ರೈತ ಸಂಘಟನೆಗಳು ತೀವ್ರವಾಗಿ ಖಂಡಿಸಿ ಸಚಿವ ಶಿವಾನಂದ ಪಾಟೀಲ್ ಭಾವಚಿತ್ರಕ್ಕೆ ಚಪ್ಪಲಿ ಹಾರವನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಥಣಿ ಕೆಎಬಿಯಿಂದ ಶಿವಯೋಗಿ ಸರ್ಕಲ್ ವರಿಗೆ ಸಚಿವ ಶಿವಾನಂದ ಪಾಟೀಲ್ ಭಾವಚಿತ್ರ ಮೆರವಣಿಗೆ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಶಿವಾನಂದ ಪಾಟೀಲ್ ಭಾವಚಿತ್ರ ಹರಿದು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಇದೆ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪ್ರಕಾಶ್ ಪೂಜಾರಿ ಮಾತನಾಡಿ, ರೈತ ಬಗ್ಗೆ ಕಾಳಜಿ ಇಲ್ಲದೆ ಇರುವ ಸರ್ಕಾರ ಅಂದ್ರೆ ಈ ಸರ್ಕಾರ ಎಂದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ತುಂಬಾ ಬರವಸೆ ಇಟ್ಟುಕೊಂಡು ಈ ಸರ್ಕಾರ ಆಯ್ಕೆ ಮಾಡಲಾಯಿತು, ಈ ಸಚಿವ ಸಂಪುಟದಲ್ಲಿ ಒರ್ವ ಮಂತ್ರಿ ರೈತರ ಬಗ್ಗೆ ಒಂದು ಚೂರೂ ಕಾಳಜಿ ಇಲ್ಲದೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ, ಅದರಲ್ಲೂ ಪ್ರಮುಖ ರಾಜಕೀಯ ನಾಯಕರು ಪಕ್ಕದಲ್ಲಿ ಕುಳಿಸಿಕೊಂಡು ರೈತರು ಬರಗಾಲಕ್ಕೆ ಆಸೆ ಪಡುತ್ತಾರೆ ಎಂದು ಹೇಳುತ್ತಾರೆ, ಆ ರೀತಿ ಯಾವತ್ತೂ ಅನ್ನದಾತ ಬಯಸಿಲ್ಲ ಆದರೆ ಸಚಿವ ಶಿವಾನಂದ ಪಾಟೀಲ್ ಮೊನ್ನೆ ಸುಟ್ಟಟ್ಟಿ ಗ್ರಾಮದಲ್ಲಿ ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಆ ಹೇಳಿಕೆ ವಾಪಸ್ ಪಡೆಯಬೇಕು, ಇಲ್ಲವಾದರೆ ರೈತರಿಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

Read All News